ಸುದ್ದಿ ಸಂಕ್ಷಿಪ್ತ

ಮೇ. 20 : ಹೊಲಿಗೆ ಯುಂತ್ರ ವಿತರಣೆ

ಮಡಿಕೇರಿ ಮೇ, 17:-ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮ  ವತಿಯಿಂದ ಮೇ, 20ರಂದು ಬೆಳಗ್ಗೆ 10 ಗಂಟೆಗೆ ಶಾರದಾಶ್ರಮದ ಸ್ವಾಮಿ ಶಾಂಭವನಂದ ಸಭಾಂಗಣದಲ್ಲಿ ಸಹೋದರಿ ನಿವೇದಿತಾ ಅವರ 150ನೇ ಹುಟ್ಟು ಹಬ್ಬವನ್ನು ಮತ್ತು ಶ್ರೀ ಶಾರದದೇವಿ ಕಲಿಕಾ ತರಬೇತಿ ಸಂಸ್ಥೆಯ ವರ್ಷಾಚರಣೆ ಪ್ರಯುಕ್ತ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಉಚಿತ ವಿತರಣೆ ಕಾರ್ಯಕ್ರಮ ಹಾಗೂ ಬುಡಕಟ್ಟು ಜನರಿಗೆ ಸೋಲಾರ್ ದೀಪಗಳ ಉಚಿತ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಯೋಗ ತರಬೇತಿ ಕಾರ್ಯಕ್ರಮ ನಡೆಯಲಿದೆ. ಶಾಸಕರಾದ ವೀಣಾ ಅಚ್ಚಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. (ಕೆಸಿಐ,ಎಸ್.ಎಚ್)

 

Leave a Reply

comments

Related Articles

error: