
ಪ್ರಮುಖಸುದ್ದಿ, ದೇಶ(ಗೋವಾ) ಮೇ.19:- ದಕ್ಷಿಣ ಗೋವಾದ ಸಾನ್ವೋರ್ಡೆಮ್ ಹಾಗೂ ಕೊರ್ಕೊರೆಮ್ ಗ್ರಾಮದ ಮಧ್ಯೆ ನಿರ್ಮಿಸಲಾದ ಪೋರ್ಚುಗೀಸ್ ಕಾಲದ ಕಬ್ಬಿಣದ ಸೇತುವೆ ಕುಸಿದು ಮಹಾ ದುರಂತವೊಂದು ಗುರುವಾರ ಸಂಭವಿಸಿದೆ.
ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ. ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ನೋಡಲು ಜನ ಸೇರಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ಸಂಭವಿಸಿದ ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನೆಯಲ್ಲಿ 50 ಮಂದಿ ನದಿಪಾಲಾಗಿದ್ದವರಲ್ಲಿ 20 ಮಂದಿ ಈಜಿ ದಡ ಸೇರಿದ್ದರೆ, 14 ಮಂದಿಯನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. – (ವರದಿ:ಕೆ.ಎಸ್,ಎಸ್.ಎಚ್)