ಕರ್ನಾಟಕಪ್ರಮುಖ ಸುದ್ದಿ

ನನ್ನ ಜನಪ್ರಿಯತೆಗೆ ಚ್ಯುತಿ ತರಲು ಕುತಂತ್ರ : ಕುಮಾರಸ್ವಾಮಿ ಆರೋಪ

ಪ್ರಮುಖಸುದ್ದಿ,ರಾಜ್ಯ(ರಾಮನಗರ) ಮೇ.19:- ಮುಂದಿನ ಚುನಾವಣೆಯಲ್ಲಿ ನನ್ನ ಜನಪ್ರಿಯತೆಗೆ ಚ್ಯುತಿ ತರಲು ಕುತಂತ್ರ ನಡೆಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮಾಗಡಿಯಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ  ಜೆಡಿಎಸ್ ರಾಜ್ಯಾದ್ಯಕ್ಷ ಎಚ್ ಡಿಕುಮಾರಸ್ವಾಮಿ ಎಸ್ ಐ ಟಿ ವಿಚಾರಣೆ ವಿಚಾರಕ್ಕೆ ಸಂಭಂದಿಸಿದಂತೆ ಪ್ರತಿಕ್ರಿಯೆ ನೀಡಿದರು. ಮೊದಲು ಒಂದು ಸಮನ್ಸ್ ನೀಡಲಾಗಿದೆ. ಸಮನ್ಸ್ ಕೊಡಿಸಿ ಎಸ್ ಐ ಟಿ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ.  ನನ್ನ ಜನಪ್ರಿಯತೆಯನ್ನು ಕುಂಠಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ವಿಚಾರಣೆ ವಿಚಾರವಾಗಿ ಯಾರ್ಯಾರು ಮೀಟಿಂಗ್ ಮಾಡಿದ್ದಾರೆ ಅನ್ನುವುದು ನನಗೆ ಗೊತ್ತಿದೆ. ಗುರುವಾರ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ್ದೇನೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಯಾವಾಗ ಬೇಕಾದರೂ ಬರುವುದಾಗಿ ತಿಳಿಸಿದ್ದೇನೆ. ಈ ಹೆಸರಿನಲ್ಲಿ ನನ್ನನ್ನು ಫಿಕ್ಸ್ ಮಾಡುತ್ತೇವೆ  ಅನ್ನೋದು ಅಸಾಧ್ಯ ಎಂದರು.

ನನ್ನ ಜನಪ್ರಿಯತೆ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಗೊತ್ತಿದೆ. ಮುಂದಿನ ಚುನಾವಣೆಯಲ್ಲಿ ಜನಪ್ರಿಯತೆಗೆ ಸೆಡ್ಡು ಹೊಡೆಯಲು ಪ್ರಯತ್ನಿಸುತ್ತಿದ್ದಾರೆ. ನನ್ನ ವೇಗ ತಡೆಯಲು ಹಲವಾರು ಕುತಂತ್ರಗಳು ನಡೆಯುತ್ತಿವೆ. ಯಾವುದಕ್ಕೂ ಬಗ್ಗುವುದಿಲ್ಲ, ಅಂಜುವುದೂ ಇಲ್ಲ. ರಾಜ್ಯದಲ್ಲಿ ಇದೀಗ ಬಿಜೆಪಿಯವರು ಬರ ಪ್ರವಾಸ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಏನೇನು ಕೆಲಸ ಮಾಡಿದ್ದಾರೆ. ಅದರ ಬಗ್ಗೆ ಅವರು ವಿಮರ್ಶೆ ಮಾಡಿಕೊಳ್ಳಲಿ. ರಾಜ್ಯದ ಬರಗಾಲದ ಕುರಿತು  ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಲಿ. ಸರ್ಕಾರದ ಕೆಲಸದಲ್ಲಿ ಲೋಪದೋಷಗಳಿವೆ. ರೈತರ ನೆರವಿಗೆ ಎರಡೂ ಪಕ್ಷಗಳು ನೆರವಾಗಿಲ್ಲ. ರಾಜ್ಯದ ಜನತೆ ಎರಡು ಪಕ್ಷಗಳ ವಿರುದ್ದ ತಿರುಗಿ ಬೀಳಲಿದ್ದಾರೆ. ನೀರಾವರಿ ವಿಚಾರದಲ್ಲಿ ಲೂಟಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ತನಿಖೆಗಳಾಗಬೇಕಾದ ಪರಿಸ್ಥಿತಿ ಬರಲಿದೆ ಎಂದರು. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: