ಮೈಸೂರು

ಇಷ್ಟಕಾಮ್ಯ ಭಾವಸಂವಾದ ಕೃತಿ ಬಿಡುಗಡೆ : ಪ್ರೇಕ್ಷಕರು ಸಿನಿಮಾ ನೋಡಿ ಕೈ ಹಿಡಿಯುತ್ತಿದ್ದಾರೆ : ನಾಗತಿಹಳ್ಳಿ

ಮೈಸೂರು, ಮೇ.19:- ಗುಬ್ಬಿಗೂಡು ಸಾಂಸ್ಕೃತಿಕ ಸಿರಿ,  ಮೈಸೂರು  ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಇವರ ಸಹಯೋಗದಲ್ಲಿ ಸಾಹಿತಿ, ಲೇಖಕ,  ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ರವರ ಇಷ್ಟಕಾಮ್ಯ ಭಾವ ಸಂವಾದ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರು ವಿಶ್ವವಿದ್ಯಾಲಯದ  ಮಾನಸ ಗಂಗೋತ್ರಿಯ ಮೈಸೂರು  ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ  ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ವೇದಿಕೆಯ ಗಣ್ಯರು ಇಷ್ಟಕಾಮ್ಯ ಭಾವ ಸಂವಾದ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ  ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳುವ ಸಾರಾಂಶವಿರುವ ಚಿತ್ರಗಳು ಮೂಡಿಬರುತ್ತಿದೆ. ನನ್ನ ನಿರ್ದೇಶನದ ಅಮೇರಿಕಾ ಅಮೇರಿಕಾ ಚಿತ್ರ ಅದ್ಭುತವಾಗಿ ಮೂಡಿಬಂದ ಕಾರಣ ಪ್ರೇಕ್ಷಕರು ಸಿನಿಮಾ ನೋಡಿ ನಮ್ಮ ಕೈ ಹಿಡಿದಿದ್ದಾರೆ. ಅಮೇರಿಕಾ ಅಮೇರಿಕಾ ಚಿತ್ರದ ನನಗೆ ಇಷ್ಟವಾದ ಚಿತ್ರ. ಮತ್ತೊಂದು ಇಷ್ಟವಾದ ಚಿತ್ರ ಇಷ್ಟ ಕಾಮ್ಯ ಭಾವ ಎಂದರಲ್ಲದೇ ಇಷ್ಟ ಕಾಮ್ಯ ಕೃತಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಿರುತೆರೆ ಚಲನಚಿತ್ರ ನಟಿ ಮಯೂರಿ, ಅಂಕಣಕಾರ ಗುಬ್ಬಿಗೂಡು ರಮೇಶ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ನೀಲಗಿರಿ ಎಂ ತಳವಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮೈಸೂರು ವಿವಿ ಆಡಳಿತಾಧಿಕಾರಿ ಪ್ರೊ.ಸಿ.ರಾಮಸ್ವಾಮಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ, ನಿರ್ದೇಶಕಿ ಪ್ರೀತಿ ಶ್ರೀಮಂದರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: