ಸುದ್ದಿ ಸಂಕ್ಷಿಪ್ತ

ಬಿ.ಇ.ಎಂ.ಎಲ್ ಖಾಸಗೀಕರಣ ಮೇ.30ಕ್ಕೆ ಹರತಾಳ

ಮೈಸೂರು.ಮೇ.19 : ರಕ್ಷಣಾವಲಯದಲ್ಲಿ ವಿಶಿಷ್ಠ ಸೇವೆ ಒದಗಿಸುತ್ತಿರುವ ನಗರದ ಪ್ರತಿಷ್ಠಿತ ಬಿ.ಇ.ಎಂ.ಎಲ್ ಸಂಸ್ಥೆಯನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸುವ ನಿರ್ಣಯವನ್ನು ಭಾರತ್ ಅರ್ತ್ ಮೂವರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್ ಮತ್ತು ಬಿಇಎಂಎಲ್ ಅಧಿಕಾರಿಗಳ ಒಕ್ಕೂಟ ಹಾಗೂ ಬಿಇಎಂಎಲ್ ಖಾಸಗೀಕರಣ ವಿರೋಧಿ ಹೋರಾಟ ಸಮಿತಿಯೂ ಈಚೆಗೆ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಂಸ್ಥೆಯ ಖಾಸಗೀಕರಣ ವಿರೋಧಿಸಿ ಮೇ.30ರಂದು ನಗರದಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಹರತಾಳ ನಡೆಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಈ ಹೋರಾಟದಲ್ಲಿ ಮೈಸೂರಿನ ಹಲವಾರು ಸಂಘಟನೆಗಳು ಕೈಜೋಡಿಸಲಿದ್ದು ಹೋರಾಟವನ್ನು ತೀವ್ರಗೊಳಿಸಿ ಸಾರ್ವಜನಿಕರನ್ನು ಜಾಗೃತಗೊಳಿಸುವುದು ಸೇರಿದಂತೆ ಖಾಸಗೀಕರಣ ವಿರೋಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಬಿ.ಇ.ಎಂ.ಎಲ್ ಖಾಸಗೀಕರಣ ವಿರೋಧಿ ಸಮಿತಿ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಸಂಪಾದಕ ರಾಜಶೇಖರ ಕೋಟಿ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕಾಂಗ್ರೆಸ್ ಮುಖಂಡ ಎಂ.ಲಕ್ಷ್ಮಣ, ಸಿಐಟಿಯು ಜಿಲ್ಲಾಧ್ಯಕ್ಷ ಬಾಲಾಜಿ ರಾವ್ ಮತ್ತು ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ ಉಪಸ್ಥಿತರಿದ್ದು ನಿರ್ಣಯವನ್ನು ಬೆಂಬಲಿಸಿದರು. (ಕೆ.ಎಂ.ಆರ್)

Leave a Reply

comments

Related Articles

error: