ಸುದ್ದಿ ಸಂಕ್ಷಿಪ್ತ

ಮೇ 20 ಮತ್ತು 22 ರಂದು ವಿದ್ಯುತ್ ವ್ಯತ್ಯಯ

 ರಾಜ್ಯ,(ಮಡಿಕೇರಿ) ಮೇ 19:-ಮಡಿಕೇರಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಕೋಟೆ ಫೀಡರ್‍ನಲ್ಲಿ  ತ್ವರಿತ ವಿದ್ಯುತ್ ಜಾಲದ ಸಮಗ್ರ ಅಭಿವೃದ್ದಿ ಯೋಜನೆ ಮತ್ತು ಸುಧಾರಣಾ ಕಾಮಗಾರಿ ನಡೆಯುತ್ತಿರುವುದರಿಂದ ಮೇ, 20 ಮತ್ತು 22 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕೋಟೆ ಫೀಡರ್‍ನಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಆದ್ದರಿಂದ ಕಾಲೇಜು ರಸ್ತೆ, ಚೌಕಿ, ಇಂಡಸ್ಟ್ರಿಯಲ್ ಏರಿಯಾ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮತ್ತು ಎಸ್.ಬಿ.ಎಂ. ಬ್ಯಾಂಕ್ ಸುತ್ತಮುತ್ತ, ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ. (ವರದಿ:ಕೆ.ಸಿ.ಐ, ಎಲ್.ಜಿ)

Leave a Reply

comments

Related Articles

error: