ಸುದ್ದಿ ಸಂಕ್ಷಿಪ್ತ
ಉತ್ತಮ ಆರೋಗ್ಯಕ್ಕೆ ಆಯುರ್ವೇದ ಮತ್ತು ಯೋಗ ಮೇ.20ಕ್ಕೆ
ಮೈಸೂರು.ಮೇ.19 : ರಾಗ ಸಂಗೀತ ಅಕಾಡೆಮಿಯಿಂದ ಮೇ.20ರ ಸಂಜೆ 4.30ಕ್ಕೆ ಉತ್ತಮ ಆರೋಗ್ಯಕ್ಕೆ ಆಯುರ್ವೇದ ಮತ್ತು ಯೋಗ ವಿಷಯವಾಗಿ ಉಪನ್ಯಾಸವನ್ನು ಕುವೆಂಪುನಗರದ ಪ್ರಜ್ಞಾ ಕುಟೀರ ಆಯುರ್ವೇದ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದು, ಕೇಂದ್ರದ ನಿರ್ದೇಶಕ ಡಾ.ಎನ್.ವಿ.ಕೃಷ್ಣಮೂರ್ತಿ ಉಪನ್ಯಾಸ ನೀಡುವರು. ನಂತರ ವಿದ್ವಾನ್ ಶುಭಮಂಗಳ ರಘುನಂದನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದ್ದು. ಗೋಷ್ಠಿಯಲ್ಲಿ ಅಚ್ಚುತರಾವ್ (ವಯಾಲಿನ್) ರಾಧೇಶ್ (ಮೃದಂಗ) ಮತ್ತು ಮಂಜುನಾಥ್ (ಘಟಂ) ನಲ್ಲಿ ಸಾಥ್ ನೀಡುವರು. (ಕೆ.ಎಂ.ಆರ್)