ಸುದ್ದಿ ಸಂಕ್ಷಿಪ್ತ

ಅಖಿಲ ಭಾರತೀಯ ಸಂಶೋಧಕರ ಸಂಘದ ವಾರ್ಷಿಕೋತ್ಸವ : ಸಂವಾದ ಮೇ.20ಕ್ಕೆ

ಮೈಸೂರು.ಮೇ.19 : ಅಖಿಲ ಭಾರತೀಯ ಸಂಶೋಧಕರ ಸಂಘದ (ಎಐಆರ್ಎ) ವಾರ್ಷಿಕೋತ್ಸವ ಸಮಾರಂಭವನ್ನು ಮೇ.20ರ ಮಧ್ಯಾಹ್ನ 2.30ಕ್ಕೆ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸಮಾರಂಭದಲ್ಲಿ, ‘ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಸ್ಥಿತಿಗತಿ ಮತ್ತು ಬಹುಶಿಸ್ತಿನ ಸಂಶೋಧನೆಯ ಪ್ರಸ್ತುತತೆ’ ವಿಷಯವಾಗಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಕಾರ್ಯಕ್ರಮ ಉದ್ಘಾಟಿಸುವರು. ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಚಿದಾನಂದಗೌಡ ಪ್ರಧಾನ ಭಾಷಣ ಮಾಡುವರು, ಎಐಆರ್ಎ ಗೌರವಾಧ್ಯಕ್ಷ ಪ್ರೊ.ಕೇಶವನ್ ಪ್ರಸಾದ್ ಕೆ ಮರಟ್ಟಿ ಅಧ್ಯಕ್ಷತೆ ವಹಿಸುವರು. ಮೈ.ವಿವಿಯ ವಿವಿಧ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಆರ್.ಇಂದಿರಾ ಪ್ರೊ.ಬಿ.ಹೆಚ್.ಸುರೇಶ್, ಪ್ರೊ.ಹೆಚ್.ಎಸ್. ಪ್ರಕಾಶ್, ಪ್ರೊ.ಪ್ರೀತಿ ಶುಭಚಂದ್ರ ಹಾಗೂ ಮಹಾರಾಜ ಕಾಲೇಜಿನ ವೈದ್ಯಾಧಿಕಾರಿ ಡಾ.ಎಂ.ಎಸ್.ಬಸವರಾಜು ಸಂವಾದದಲ್ಲಿ ವಿಷಯ ಮಂಡಿಸುವರು.(ಕೆ.ಎಂ.ಆರ್)

Leave a Reply

comments

Related Articles

error: