ಸುದ್ದಿ ಸಂಕ್ಷಿಪ್ತ

ಮೇ.21ಕ್ಕೆ ಹನುಮ ಜಯಂತಿ

ಮೈಸೂರು.ಮೇ.19 : ತ್ರಿಪುರ ಭೈರವಿ ಮಠದ ಶ್ರೀಆಂಜನೇಯ ದೇವಸ್ಥಾನದಿಂದ ಮೇ.21ರಂದು ಹನುಮ ಜಯಂತಿಯನ್ನು ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ವಿವಿಧ ಪೂಜ ಕೈಂಕರ್ಯಗಳು ನಡೆಯಲಿದ್ದು ಭೈರವಿಮಠದ ಕೃಷ್ಣಮೋಹನಾನಂದಗಿರಿ ಸ್ವಾಮಿಗಳು ಸಾನಿಧ್ಯ ವಹಿಸುವರು, ಸಂಜೆ ಉತ್ಸವವಿದ್ದು ಉತ್ಸವವು ಚಿಕ್ಕ ಗಡಿಯಾರ ವೃತ್ತ, ಡಿ.ದೇವರಾಜ ಅರಸ್, ದಿವಾನ್ಸ್ ರಸ್ತೆ, ಶಿವರಾಂಪೇಟೆಯ ಮೂಲಕ ದೇವಸ್ಥಾನಕ್ಕೆ ಹಿಂತಿರುಗುವುದು. (ಕೆ.ಎಂ.ಆರ್)

Leave a Reply

comments

Related Articles

error: