ಸುದ್ದಿ ಸಂಕ್ಷಿಪ್ತ

ಡಾ.ಬಾಬು ಜಗಜೀವನ್ ರಾಮ್ 110ನೇ ಜಯಂತಿ ಮೇ.20ಕ್ಕೆ

ಮೈಸೂರು.ಮೇ.19 : ಬಾಬು ಜಗಜೀವನ್ ರಾಮ್ ಅವರ 110ನೇ ಜಯಂತಿಯಂಗವಾಗಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮೈಸೂರು ವಿವಿಯ ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಸಂಸ್ಥೆಯಿಂದ ಮೇ.20, ಬೆಳಿಗ್ಗೆ 10.30ಕ್ಕೆ ಮಾನಸಗಂಗೋತ್ರಿಯ ಬಾಬು ಜಗಜೀವನ್ ರಾಮ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸಂಸ್ಥೆಯ ನಿರ್ದೇಶಕ ಪ್ರೊ.ಕೆ.ಸದಾಶಿವ ಉದ್ಘಾಟಿಸುವರು, ಮೈ.ವಿವಿಯ ಮಾಜಿ ಉಪ ಕುಲಪತಿ  ಪ್ರೊ.ಎಸ್.ಎನ್.ಹೆಗಡ್ಡೆ ಉದ್ಘಾಟನಾ ಭಾಷಣ ಮಾಡುವರು. ಕುಲಸಚಿವ (ಪರೀಕ್ಷಾಂಗ) ಪ್ರೊ.ಜೆ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಯಾಗಿ ಮಾಜಿ ಕೇಂದ್ರ ಸಚಿವ ಪ್ರೊ.ಸಂಜಯ್ ಪಾಸ್ವಾನ್, ಬನಾರಸ್ ಹಿಂದೂ ವಿವಿಯ ಪ್ರೊ.ತೇಜ್ ಪ್ರತಾಪ್ ಸಿಂಗ್ ಹಾಗೂ ಹೈದ್ರಾಬಾದ್ ವಿವಿಯ ನ ಇತಿಹಾಸ ವಿಭಾಗದ ಡಾ.ವೈ.ಸ್ವರೂಪ ಆರ್.ಶೇಖರ್ ಇವರುಗಳು ಆಗಮಿಸುವರು.(ಕೆ.ಎಂ.ಆರ್)

 

Leave a Reply

comments

Related Articles

error: