ಕರ್ನಾಟಕಪ್ರಮುಖ ಸುದ್ದಿ

ಬರಗಾಲದಲ್ಲಿ ಜೆಡಿಎಸ್ ನಾಯಕರು ಸಿನಿಮಾ ಶೂಟಿಂಗ್ ನಿರತರಾಗಿದ್ದರು : ಎನ್.ರವಿಕುಮಾರ್ ವ್ಯಂಗ್ಯ

ಪ್ರಮುಖಸುದ್ದಿ, ರಾಜ್ಯ(ಬೆಂಗಳೂರು) ಮೇ.20:- ಬರಗಾಲದಲ್ಲಿ ಜೆಡಿಎಸ್ ನಾಯಕರು ಸಿನಿಮಾ ಶೂಟಿಂಗ್ ನಲ್ಲಿ ನಿರತರಾಗಿದ್ದರು ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಎನ್.ರವಿಕುಮಾರ್ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ನಾಯಕರ ಬರ ಅಧ್ಯಯನ ಪ್ರವಾಸದ ವೇಳೆ ದಲಿತರ ಮನೆಗಳಲ್ಲಿ ಹೊಟೇಲ್ ನಿಂದ ತಂದ ತಿಂಡಿ ತಿಂದಿರುವ ಆರೋಪ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಒಂದೇ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಲಿತರ ಮನೆಗೆ ಹೋದಾಗ ಹೊರಗಿನಿಂದ ತಿಂಡಿ ತರುವುದು ಅನಿವಾರ್ಯ. ಅದನ್ನು ಸ್ವೀಕರಿಸದೇ ಬಂದರೆ ಅದಕ್ಕಿಂತ ಘೋರ ಅಪಮಾನ ಬೇರೊಂದಿಲ್ಲ. ಮುಖ್ಯವಲ್ಲದ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಕೊರತೆಯನ್ನು  ಮುಚ್ಚಿಕೊಳ್ಳುತ್ತಿದ್ದಾರೆ ಎಂದರು. ಜೆಡಿಎಸ್ ನಾಯಕರು ಬರಗಾಲದಲ್ಲಿ ರೈತರ ಕಷ್ಟಗಳಿಗೆ ಸ್ಪಂದಿಸದೇ ಸಿನಿಮಾ ಶುಟಿಂಗ್ ನಲ್ಲಿ ನಿರತರಾಗಿದ್ದರು ಎಂದರು.

ದಲಿತರ ಮನದಾಳದ ನೋವು ಅರಿಯದೇ ದಲಿತರ ಅಸಹಾಯಕತೆಯನ್ನು ಮೂದಿಸಲಾಗಿದೆ. ತಕ್ಷಣ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆತಿಥ್ಯ ನೀಡಿರುವ ದಲಿತರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ದಲಿತರ ಮನದಾಳದ ನೋವನ್ನು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅರ್ಥ ಮಾಡಿಕೊಳ್ಳದೆ ಅಯೋಗ್ಯ ತನದಿಂದ ನಡೆದುಕೊಳ್ಳುತ್ತಿವೆ. ಉಭಯ ಪಕ್ಷಗಳಿಗೆ  ಕಿಂಚಿತ್ತಾದರೂ ಮಾನವೀಯತೆ ಇದ್ದರೆ  ಶೋಷಿತರ ಕ್ಷಮೆಯಾಚಿಸಲು ಎಂದರು. – (ವರದಿ:ಎಸ್.ಎನ್,ಎಸ್.ಎಚ್)

Leave a Reply

comments

Related Articles

error: