ಮೈಸೂರು

ಗಿರಿಜನರ ಸಮಸ್ಯೆ ಪರಿಹರಿಸಲು ಅದಾಲತ್ : ಡಿ.ರಂದೀಪ್

ಮೈಸೂರು, ಮೇ.20:- ಜೂನ್ ತಿಂಗಳಿನಲ್ಲಿ ಪ್ರತಿ ತಾಲೂಕಿನಲ್ಲಿ ಗಿರಿಜನರ ಸಮಸ್ಯೆ ಪರಿಹರಿಸುವ ಸಂಬಂಧ ಅದಾಲತ್ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಭರವಸೆ ನೀಡಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ ಭೂಮಿ ಹಂಚಿಕೆ, ಹಕ್ಕುಪತ್ರ ಕುರಿತಂತೆ ಹಲವಾರು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಪ್ರತಿ ತಾಲೂಕಿನಲ್ಲಿ ಜೂನ್ ತಿಂಗಳಿನಿಂದ ಅದಾಲತ್ ನಡೆಸಲಾಗುವುದು ಎಂದರು.

ಅರಣ್ಯ, ಶಿಕ್ಷಣ, ಆರೋಗ್ಯ ಇಲಾಖೆಯ ಅಧಿಕಾರಿಗಳು ಅದಾಲತ್ ನಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆ ನೀಡಲಾಗುವುದು. ಅದಾಲತ್ ನಡೆಸುವುದಕ್ಕೂ ಮುನ್ನ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.ಈ ಶೈಕ್ಷಣಿಕ  ವರ್ಷದಿಂದ  ಆಶ್ರಮ ಶಾಲೆಗಳಲ್ಲಿ 426 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಜುಲೈ ಅಥವಾ ಸೆಪ್ಟೆಂಬರ್ ನಲ್ಲಿ ವರದಿ ಮಾಡಿಕೊಳ್ಳಲಿದ್ದು, ಶಾಲೆಯಲ್ಲಿ ಎಸ್ ಡಿಎಂ ಸಮಿತಿ ರಚಿಸಲಾಗುವುದು. ಇದರ ಜೊತೆ ಸಿಸಿಟಿವಿ ಅಳವಡಿಸಲಾಗುವುದು ಎಂದು ತಿಳಿಸಿದರು. (ವರದಿ:ಎಸ್.ಎಚ್)

Leave a Reply

comments

Related Articles

error: