ಪ್ರಮುಖ ಸುದ್ದಿಮೈಸೂರು

ಪಾಲಿಕೆ ಅಧಿಕಾರಿಗಳಿಂದ ನಿರಂತರ ದಾಳಿ: ಅಪಾರ ಪ್ರಮಾಣದ ಪ್ಲಾಸ್ಟಿಕ್ ವಶ

ಮೈಸೂರು, ಮೇ 20:  ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇಂದೂ ಸಹ ಅಂಗಡಿಗಳ ಮೇಲೆ ತಮ್ಮ ದಾಳಿಯನ್ನು ಮುಂದುವರಿಸಿದ್ದಾರೆ.

ಪಾಲಿಕೆ ಆಯುಕ್ತೆ ವೀಣಾ ಅವರ ನೇತೃತ್ವದಲ್ಲಿ  ಮೈಸೂರಿನ ಮಹಾರಾಜ ಅಂಗಡಿ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಪ್ಲಾಸ್ಟಿಕ್ ನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಸಂತೇಪೇಟೆಯಲ್ಲೂ ಸಹ  ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ. ಇದೇ ವೇಳೆ ಪಾಲಿಕೆ ಆಯುಕ್ತೆ ವೀಣಾ ಮಳಿಗೆ ಮಾಲೀಕರಿಗೆ ಸ್ಥಳದಲ್ಲೇ 7  ಸಾವಿರ ರೂ. ದಂಡ ಹಾಕಿದ್ದಾರೆ. (ವರದಿ:ಎಸ್.ಎನ್,ಎಲ್.ಜಿ)

Leave a Reply

comments

Related Articles

error: