ಕರ್ನಾಟಕಪ್ರಮುಖ ಸುದ್ದಿ

ಚೈನ್ ಕಸಿದು ಪರಾರಿಯಾಗಿದ್ದ ಯುವತಿಯ ಬಂಧನ

ರಾಜ್ಯ, (ಮಂಗಳೂರು) ಮೇ.20:-  ಚೈನ್ ಕಸಿದು ಪರಾರಿಯಾಗಿದ್ದ ಯುವತಿಯೋರ್ವಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತಳನ್ನು  ತಮಿಳುನಾಡಿನ ಮೂಲದ ನಂದಿನಿ ಯಾನೆ ಉಮಾ ಯಾನೆ ಸಂಗೀತ( 20) ಎಂದು ಗುರುತಿಸಲಾಗಿದೆ. ಕಂಕನಾಡಿಯ ಮಹಿಳೆಯೋರ್ವಳು ಬಸ್ಸಿನಲ್ಲಿ ತನ್ನ ಮಗುವಿನೊಂದಿಗೆ  ಕುಳಿತಿದ್ದಾಗ
ಸಂಗೀತ,ಮಹಿಳೆಯ ಬಳಿ ಒರಗಿ ನಿಂತಿದ್ದಳು. ಸಮಯ ನೋಡಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿದ ಆರೋಪಿ ಒಂದೂವರೆ ಪವನ್ ತೂಕದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಳು. ಆರೋಪಿ ಧರಿಸಿದ್ದ ಬಟ್ಟೆಯ ಗುರುತಿನೊಂದಿಗೆ ಕಂಕನಾಡಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಆಕೆಯನ್ನು ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದ ಬಳಿಯಿಂದ ಬಂಧಿಸಿ, ಚೈನ್ ನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.  – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: