ಸುದ್ದಿ ಸಂಕ್ಷಿಪ್ತ

ಜೆ.ಎಸ್.ಎಸ್ : ಅತಿಥಿ ಗೃಹ ಉದ್ಘಾಟನೆ ಮೇ.22ಕ್ಕೆ

ಮೈಸೂರು.ಮೇ.20 : ಜೆ.ಎಸ್.ಎಸ್. ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾನಿಲಯದ ಅತಿಥಿ ಗೃಹದ ಉದ್ಘಾಟನೆಯನ್ನು ಮೇ.22ಕ್ಕೆ ಸಂಜೆ 4ಕ್ಕೆ ನೆರವೇರಿಸಲಾಗುವುದು.

ನವದೆಹಲಿಯ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಮೋಹನ ಎಂ.ಶಾಂತನಗೌಡರ ಉದ್ಘಾಟಿಸುವರು. ವಿಶ್ರಾಂತ ನ್ಯಾಯಾದೀಶ ಡಾ.ಶಿವರಾಜ್ ವಿ.ಪಾಟೀಲ್ ಅಧ್ಯಕ್ಷತೆ ವಹಿಸುವರು. ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಸಾನಿಧ್ಯವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಅಶೋಕ್ ಬಿ. ಹಿಂಚಿಗೇರಿ, ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಇವರುಗಳು ಉಪಸ್ಥಿತರಿರುವರು.

ಅತಿಥಿ ಗೃಹವೂ ನವನವೀನ ಮಾದರಿಯ ವಿವಿಧ ನಮೂನೆಯ 48 ಕೊಠಡಿಗಳನ್ನು ಹೊಂದಿದೆ. (ಕೆ.ಎಂ.ಆರ್)

 

Leave a Reply

comments

Related Articles

Check Also

Close
error: