ಸುದ್ದಿ ಸಂಕ್ಷಿಪ್ತ

ಮೈಸೂರು ದಸರಾ ಮಹೋತ್ಸವ ಅ.4 ರಂದು ಪಾರಂಪರಿಕ ನಡಿಗೆ

dasara-logo-2016-octನಾಡಹಬ್ಬ ಮೈಸೂರು ದಸರಾ ಮಹೋತ್ಸವದಂಗವಾಗಿ ಅ.4ರ ಮಂಗಳವಾರದಂದು ರಂಗಚಾರ್ಲು ಪುರಭವನದಲ್ಲಿ ಬೆಳಿಗ್ಗೆ 7ಕ್ಕೆ ಪಾರಂಪರಿಕೆ ನಡಿಗೆಯನ್ನು ಜಿಲ್ಲಾಡಳಿತ ಆಯೋಜಿಸಿದೆ. ಪಾರಂಪರಿಕ ನಡಿಗೆಗೆ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಚಾಲನೆ ನೀಡುವರು. ಬೆಳಿಗ್ಗೆ 9 ಗಂಟೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರೈತ ದಸರಾ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಚಾಲನೆ ನೀಡುವರು.  ಬೆಳಿಗ್ಗೆ  10 ಗಂಟೆಗೆ ಜಗನ್ಮೋಹನ ಅರಮನೆಯಲ್ಲಿ ಸಚಿವ ತನ್ವೀರ್ ಸೇಠ್ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಬೆಳಿಗ್ಗೆ 10.30ಕ್ಕೆ ಜೆ.ಕೆ.ಮೈದಾನದಲ್ಲಿ ‘ರೈತದಸರಾ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಸಚಿವ ಕೃಷ್ಣಬೈರೇಗೌಡ ನೆರವೇರಿಸುವರು.

ಮುಖ್ಯ ಅತಿಥಿಗಳಾಗಿ  ಸಂಸದರಾದ ಪತ್ರಾಪ್ ಸಿಂಹ, ಧ್ರುವನಾರಾಯಣ, ಸಿ.ಎಸ್.ಪುಟ್ಟರಾಜು, ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರು, ಕೆ.ಎಸ್. ಈಶ್ವರಪ್ಪ, ಶಾಸಕರಾದ ಜಿ.ಟಿ.ದೇವೇಗೌಡ, ವಿ.ಶ್ರೀನಿವಾಸ ಪ್ರಸಾದ್, ಹೆಚ್.ಪಿ.ಮಂಜುನಾಥ್, ಎಂ.ಕೆ.ಸೋಮಶೇಖರ್, ವೆಂಕಟೇಶ್, ವಾಸು. ಸಾ.ರಾ.ಮಹೇಶ್. ಹಾಗೂ ಚಿಕ್ಕಮಾದು ಎಸ್.  ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜು, ಆರ್. ಧರ್ಮಸೇನಾ ಹಾಗೂ ಕೆ.ಟಿ.ಶ್ರೀಕಂಠೇಗೌಡ ಜಿ.ಪಂ.ಅಧ್ಯಕ್ಷೆ ನಯೀಮ್ ಸುಲ್ತಾನ ನಜೀರ್ ಅಹಮದ್ ಉಪಸ್ಥಿತರಿರುವರು

 

Leave a Reply

comments

Related Articles

error: