
ಕರ್ನಾಟಕಪ್ರಮುಖ ಸುದ್ದಿ
ಚಿರತೆ ಹಿಡಿಯಲು ಇಟ್ಟ ಬೋನಿನಲ್ಲಿ ಸಿಲುಕಿಕೊಂಡ ಗ್ರಾಮಸ್ಥರು
ರಾಜ್ಯ(ದಾವಣಗೆರೆ) ಮೇ.20:- ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯ ಕಡತಿ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮಂದಿ ಬೋನಿನೊಳಗೆ ಸೇರಿಕೊಂಡ ಘಟನೆ ನಡೆದಿದೆ.
ಗ್ರಾಮದ ಹೊರವಲಯದಲ್ಲಿ ಚಿರತೆ ಹೆಚ್ಚಿದೆ ಎಂದು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳು ಚಿರತೆಯನ್ನು ಹಿಡಿಯಲು ಬೋನೊಂದನ್ನು ತಂದಿರಿಸಿದ್ದರು. ಸ್ಥಳೀಯರು ತಮ್ಮ ಜಮೀನಿಗೆ ನೀರು ಹಾಯಿಸಲು ಹೋದಾಗ ಚಿರತೆ ತನ್ನೆರಡು ಮರಿಗಳೊಡನೆ ಪ್ರತ್ಯಕ್ಷವಾಗಿದೆ. ಇದರಿಂದ ಭಯಗೊಂಡ ಗ್ರಾಮಸ್ಥರು ಎದ್ದೆನೋ ಬಿದ್ದೇನೋ ಎಂದು ಅಲ್ಲಿಂದ ಕಾಲ್ಕಿತ್ತಿದ್ದು, ಅರಣ್ಯ ಇಲಾಖೆ ಇಟ್ಟಿದ್ದ ಬೋನಿನೊಳಗೆಸಿಲುಕಿಕೊಂಡರು. ಬಳಿಕ ತಮ್ಮ ಮೊಬೈಲ್ ಮೂಲಕ ಸ್ನೆಹಿತರಿಗೆ ಕರೆ ಮಾಡಿ ತಾವು ಬೋನಿನಲ್ಲಿ ಸಿಲುಕಿಕೊಂಡಿರುವುದಾಗಿ ತಿಳಿಸಿದ್ದು, ಸ್ನೇಹಿತರು ಬಂದು ಅವರನ್ನು ಬೋನಿನಿಂದ ಬಿಡಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)