ಮನರಂಜನೆಮೈಸೂರು

ರೈತನ ಸಂಕಷ್ಟ ತೆರೆದಿಟ್ಟ ಧನ್ವಂತರಿ ಚಿಕಿತ್ಸೆ ನಾಟಕ

ರಂಗಾಯಣದ ಭೂಮಿಗೀತದಲ್ಲಿ ಮೈಸೂರಿನ ಶ್ರೀನಟರಾಜ ಮಹಿಳಾ ಕಾಲೇಜು ವತಿಯಿಂದ ಧನ್ವಂತರಿ ಚಿಕಿತ್ಸೆ ನಾಟಕ ಪ್ರದರ್ಶನಗೊಂಡಿತು.

ನಾಟಕವು ದೇಶದ ಬೆನ್ನೆಲುಬು ಎಂದು ಕರೆಯಿಸಿಕೊಳ್ಳುವ ರೈತರ ಜೀವನ ಯಾವರೀತಿ ಇದೆ ಎನ್ನುವುದನ್ನು ತಿಳಿಸಿತು. ತೀರಾ ಸಂಕಷ್ಟಗಳನ್ನೆದುರಿಸುವ ರೈತರ ಪರ ಧ್ವನಿಯೆತ್ತುವವರು ಯಾರೂ ಇಲ್ಲ ಎಂಬುದನ್ನು ಬಿಂಬಿಸಿತ್ತು.

ನಾಟಕದಲ್ಲಿ ವಿಶ್ವಾಮಿತ್ರ ಮತ್ತು ಪರಶುರಾಮರು ಭೂಮಿಗೆ ರೈತರ ವೇಷದಲ್ಲಿ ಬಂದಿಳಿದು ವೀಕ್ಷಿಸಲು ಇಲ್ಲಿನ ರೈತರ ಸ್ಥಿತಿ ತುಂಬಾ ಶೋಚನೀಯವಾಗಿರುವುದು ಕಂಡು ಬಂತು. ಜೀವನಶೈಲಿ, ಮನುಷ್ಯ ಮತ್ತು ಹಣದ ಪ್ರಭಾವಗಳು ಯಾವ ರೀತಿ ಕೆಲಸ ಮಾಡುತ್ತಿವೆ ಎನ್ನುವುದನ್ನು ಎತ್ತಿ ಹಿಡಿಯಿತು.

ಪ್ರವೀಣ ಬೆಳ್ಳಿ ನಿರ್ದೇಶನದಲ್ಲಿ ಶ್ರೀ ನಟರಾಜ ಮಹಿಳಾ ಕಾಲೇಜಿನ ಸಂಧ್ಯಾರಾಣಿ ಎಂ.ಎಸ್, ಮತ್ತು ಸುನೀತಾ ರಾಣಿ ವಿ.ಡಿ ಸಂಯೋಜಕತ್ವದಲ್ಲಿ ನಾಟಕ ಅತ್ಯುತ್ತಮವಾಗಿ ಮೂಡಿ ಬಂತು.

Leave a Reply

comments

Related Articles

error: