ಕರ್ನಾಟಕಪ್ರಮುಖ ಸುದ್ದಿ

ಪತ್ನಿಯನ್ನು ಕೊಂದು ಪ್ರಕರಣ ಮುಚ್ಚಿ ಹಾಕಿದ್ದ ಪತಿಯ ಬಂಧನ

ರಾಜ್ಯ, (ಚಿತ್ರದುರ್ಗ) ಮೇ 20: ಪತ್ನಿಯನ್ನು ಕೊಂದು ಪ್ರಕರಣ ಮುಚ್ಚಿ ಹಾಕಿದ್ದ ಪತಿಯನ್ನು ಚಿತ್ರದುರ್ಗ ನಗರದ ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗದ ಬಸವರಾಜ್ ಬಂಧಿತ ವ್ಯಕ್ತಿ.  ಈತ ದೇಗುಲದ ಹಿಂಭಾಗದಲ್ಲಿ ಮನೆ ಮಾಡಿಕೊಂಡು ಗಾರೆ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಈತನ ವಿರುದ್ಧ ಕಳ್ಳತನದ ಆರೋಪವೂ ಇದೆ ಎಂದು ತಿಳಿದು ಬಂದಿದೆ. ಬಸವರಾಜ್  ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ತನ್ನ ಪತ್ನಿಯನ್ನೇ ಕೊಲೆ ಮಾಡಿ ಸಹಜ ಸಾವೆಂದು ನಂಬಿಸಿ ಈಚಲನಾಗೇನಹಳ್ಳಿಯ ಸ್ಮಶಾನದಲ್ಲಿ ಮಣ್ಣು ಮಾಡಿದ್ದ. ಈ ಘಟನೆ ನಗರದ ಹುಚ್ಚಂಗಿ ಎಲ್ಲಮ್ಮ ದೇಗುಲದ ಬಳಿ ಮೇ 4 ರಂದು ನಡೆದಿತ್ತು.

2 ದಿನಗಳ ಹಿಂದೆ ಪೊಲೀಸರಿಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಪೊಲೀಸರು ಪ್ರಕರಣದ ಬೆನ್ನು ಹತ್ತಿದಾಗ ಕೊಲೆ ಪ್ರಕರಣ ಬಯಲಿಗೆ ಬಂದಿದೆ. ತೀವ್ರ ಹಲ್ಲೆ ಮಾಡಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ನಾಗರತ್ನಮ್ಮ(45) ಕೊಲೆಯಾದ ಮಹಿಳೆ. ಆರೋಪಿ ಬಸವರಾಜನನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಹೂತಿದ್ದ ಶವ ಹೊರತೆಗೆದು ಶವ ಪರೀಕ್ಷೆ ನಡೆಸಿದ್ದಾರೆ.
ಸ್ಥಳದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ್, ಎಸ್ಪಿ ಅರುಣ್ ರಂಗರಾಜನ್ ಮತ್ತಿತರರು ಹಾಜರಿದ್ದರು. (ವರದಿ:ಎಸ್.ಎನ್, ಎಲ್.ಜಿ)

Leave a Reply

comments

Related Articles

error: