
ಪ್ರಮುಖಸುದ್ದಿ, ದೇಶ(ನವದೆಹಲಿ) ಮೇ.20:– ಟೀಮ್ ಇಂಡಿಯಾದ ಸ್ಟಾರ್ ಕ್ರಿಕೇಟರ್ ಭುವನೇಶ್ವರ್ ಕುಮಾರ್ ಹಾಗೂ ನಟಿ ಅನುಸ್ಮೃತಿ ನಡುವೆ ಲವ್ವಿಡವ್ವಿ ನಡೆಯುತ್ತಿದ್ದು , ಕೆಲ ವಿಡಿಯೋ ತುಣುಕುಗಳು ವೈರಲ್ ಆಗಿವೆ ಎನ್ನಲಾಗುತ್ತಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಭುವನೇಶ್ವರ್ ನನ್ನ ಅವಳ ನಡುವೆ ಏನಿಲ್ಲ. ಇದು ಸತ್ಯಕ್ಕೆ ದೂರವಾಗಿದೆ. ಆದರೆ ಆರೀತಿ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭುವನೇಶ್ವರ್ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಆದರೆ ಭುವನೇಶ್ವರ್ ಮತ್ತು ನಟಿ ಅನುಸ್ಮೃತಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಈಗಾಗಲೇ ಗಾಸಿಪ್ ಗಳು ಹರಡಿವೆ. ಆದರೂ ಏನೂ ಇಲ್ಲ ಎಂದು ಜಾರಿಕೊಳ್ಳುತ್ತಿರುವ ಭುವನೇಶ್ವರ್ ನಡೆ ಮಾತ್ರ ರಹಸ್ಯವಾಗಿಯೇ ಇದೆ. ಯಾವಾಗ ಭುವನೇಶ್ವರ್ ಮತ್ತು ನಟಿ ಅನುಸ್ಮೃತಿ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಎಸ್.ಎಚ್)