ನಮ್ಮೂರುಮೈಸೂರು

1.25ಲಕ್ಷದ ರೂ.ಮೌಲ್ಯದ ಮೈಕ್ರೋಫೋನ್ ಕಳ್ಳತನ

ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆದ ಯುವ ಸಂಭ್ರಮದಲ್ಲಿ 1.25ಲಕ್ಷ ರೂ.ಮೌಲ್ಯದ ಮೈಕ್ರೋಫೋನ್ ಕಳ್ಳತನವಾಗಿದೆ.

ಯುವ ದಸರಾ ವೇದಿಕೆಯಲ್ಲಿ ನಡೆಯಲಿರುವ ತಂಡಗಳ ಆಯ್ಕೆ ಯುವ ಸಂಭ್ರಮ ಸೆಪ್ಟೆಂಬರ್ 23ರಂದು ನಡೆದಿತ್ತು. ರಿಸಾಂಟರ್ಸ್ ಕಂಪನಿಯಿಂದ ಸೌಂಡ್, ಲೈಟ್ಸ್ ಮೈಕ್ರೋಫೋನ್ ಗಳನ್ನು ಬಾಡಿಗೆಗೆ ಪಡೆಯಲಾಗಿತ್ತು.

ಆದರೆ ಅಲ್ಲಿರುವ ಕಾರ್ಡ್ ಲೆಸ್ ಮೈಕ್ರೋಫೋನ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಮೈಕ್ರೋಫೋನ್ ಎಲ್ಲಿದೆಯೆಂದು ಪತ್ತೆ ಹಚ್ಚಲು ಪ್ರಯತ್ನಿಸಲಾಯಿತಾದರೂ ಅದು ಫಲಪ್ರದವಾಗಲಿಲ್ಲ. ಕಾರ್ಯಕ್ರಮಕ್ಕೆ ಚ್ಯುತಿ ಬರಬಾರದೆಂದು ಕಂಪನಿಯವರು ದೂರು ಸಲ್ಲಿಸಿರಲಿಲ್ಲ. ಇದೀಗ ಕಂಪನಿಯು ಮೈಕ್ರೋಫೋನ್ ಕಳ್ಳತನವಾಗಿರುವುದರ ಕುರಿತು ಜಯಲಕ್ಷ್ಮಿಪುರ ಠಾಣೆಯಲ್ಲಿ ದೂರು ದಾಖಲಿಸಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

Leave a Reply

comments

Related Articles

error: