ಕರ್ನಾಟಕಮೈಸೂರು

ಅ.4 ರಿಂದ ಮೈಸೂರು ‘ದಸರಾ ದರ್ಶನ’ :  ಕೇವಲ 50 ರೂಗೆ. ಮೈಸೂರಿಗೆ

ನಾಡ ಹಬ್ಬ ಮೈಸೂರು ದಸರಾವನ್ನು ಕಣ್ತುಂಬಿ ಕೊಳ್ಳಲು ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ವಿಶೇಷ ದಸರಾ ದರ್ಶನ ರಿಯಾಯಿತಿಯ ಬಸ್ಸುಗಳನ್ನು ಆರಂಭಿಸುತ್ತಿದ್ದು ಅ.4 ರಿಂದ 7ರ ವರೆಗೆ ರಾಜ್ಯದ 29 ತಾಲೂಕು ಕೇಂದ್ರಗಳಿಂದಲೂ ಕೆ.ಎಸ್.ಆರ್.ಟಿ.ಸಿಯ ಕೆಂಪು ಬಣ್ಣದ ಬಸ್ ಗಳನ್ನು ಈ ಯೋಜನೆಗೆ ನಿಯೋಜನೆ ಮಾಡಲಾಗಿದ್ದು ದಸರಾ ದರ್ಶನ ವಾಹನಗಳಿಗೆ ಅ. 2ರ ಭಾನುವಾರದಂದು ಅರಮನೆ ಮುಂಭಾಗದಲ್ಲಿ ಶಾಸಕ ಎಂ.ಕೆ.ಸೋಮಶೇಖರ್ ಚಾಲನೆ ನೀಡಿದರು.

ಆರ್ಥಿಕ ದುರ್ಬಲ ಗ್ರಾಮೀಣ ಭಾಗದ ಜನರು ದಸರಾ ವೀಕ್ಷಣೆಗೆ ಈ ಅವಕಾಶವನ್ನು ಕಲ್ಪಿಸಲಾಗಿದ್ದು ದಸರಾವನ್ನು ಕಣ್ತುಂಬಿಕೊಳ್ಳಲು ಸುರ್ವಣವಕಾಶವಾಗಿದೆ. ದಸರಾ ದರ್ಶನ ವಾಹನಕ್ಕೆ ತಲಾ 50 ರೂ. ಶುಲ್ಕ ನಿಗದಿಪಡಿಸಲಾಗಿದ್ದು ಪ್ರತಿ ದಿನ 7 ಗಂಟೆಗೆ ಹೊರಡಲಿರುವ ದಸರಾ ವಿಶೇಷ ವಾಹನಗಳು  ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳ 29 ತಾಲ್ಲೂಕು ಕೇಂದ್ರಗಳಿಂದ 116 ಬಸ್ ಗಳನ್ನು ಬಿಡಲಾಗಿದ್ದು ಗ್ರಾಮೀಣ ಜನರನ್ನು ಮೈಸೂರಿಗೆ ಕರೆತರುವ ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕು ಕೇಂದ್ರಗಳಿಂದ ಹೊರಡುವ ಬಸುಗಳಲ್ಲಿ ಮೈಸೂರಿನ ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯವನ್ನು ವೀಕ್ಷಣೆ ಮಾಡಬಹುದು. ಜಗನ್ಮೋಹನ ಅರಮನೆ ಹಾಗೂ ಮೃಗಾಲಯದ ಪ್ರವೇಶ ದರದಲ್ಲಿಯೂ ಶೇ.50ರಷ್ಟು ಕಡಿತಗೊಳಿಸಲಾಗಿದೆ.

ನಾಡ ಹಬ್ಬ ಮೈಸೂರು ದಸರಾ ವಿಶೇಷತೆ ಆಗರ. ದೇಶ-ವಿದೇಶಗಳ ಪ್ರವಾಸಿಗರಿಗೆ ಸಾಂಸ್ಕೃತಿಯ ರಸದೌತಣ, ಭಾರತೀಯ ಪರಂಪರೆಯ ಅನಾವರಣ, ನಾಡಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು ಎನ್ನುವ ಅಧಮ್ಯ ಇಚ್ಛೆಯಿರುವ ಮಧ್ಯಮ ವರ್ಗದ ಬಡವರು ಹಬ್ಬದ ಸೊಗಬನ್ನು ಸವಿಯಬೇಕು ಎನ್ನುವ ಉದ್ದೇಶದಿಂದಲೇ ದಸರಾ ಸಮಿತಿಯೂ  ‘ದಸರಾ ದರ್ಶನ’ವನ್ನು  ಆಯೋಜಿಸಿದೆ.

Leave a Reply

comments

Related Articles

error: