
ಮೈಸೂರು
ಹಸು ತೊಳೆಯಲು ಕೆರೆಗೆ ಹೋದ ತಾತ ಮೊಮ್ಮಗ ಸಾವು
ಮೈಸೂರು, ಮೇ.20:- ಹಸು ತೊಳೆಯಲು ಕೆರೆಗೆ ಹೋದ ಅಜ್ಜ ಮತ್ತು ಮೊಮ್ಮಗ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಹುಣಸೂರಿನಲ್ಲಿ ನಡೆದಿದೆ.
ಮೃತರನ್ನು ಹಳೆಕೆರೆ ಗ್ರಾಮದ ವೀರಪ್ಪಾಜಿ(65) ಹಾಗೂ ಉಲ್ಲಾಸ(7) ಎಂದು ಗುರುತಿಸಲಾಗಿದೆ. ವೀರಪ್ಪಾಜಿ ನಾಲ್ಕೈದು ಜನ ಮೊಮ್ಮಕ್ಕಳ ಜೊತೆ ಹಸುವಿನ ಮೈತೊಳೆಯಲು ಹೋಗಿದ್ದರು. ಮೊನ್ನೆ ಮಳೆ ಬಿದ್ದಿದ್ದರಿಂದ ಕೆರೆಯಲ್ಲಿ ನೀರು ತುಂಬಿತ್ತು. ಕಾಲು ಜಾರಿ ಬಾಲಕ ನೀರೊಳಗೆ ಬಿದ್ದಿದ್ದಾನೆ. ಅವನನ್ನು ರಕ್ಷಿಸಲು ಹೋದ ತಾತನೂ ನೀರು ಪಾಲಾಗಿದ್ದಾನೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ:ಕೆ.ಎಸ್,ಎಸ್.ಎಚ್)