ಕರ್ನಾಟಕ

ಕೊಡಗಿನಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ

ರಾಜ್ಯ,(ಕೊಡಗು) ಮೇ 20:  ⁠⁠⁠ಕೊಡಗಿನಲ್ಲಿ ಮಾನವ ಹಾಗೂ ಆನೆಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆನೆಗಳ ದಾಳಿಗೆ ಕಾರ್ಮಿಕರು ಹಾಗೂ ಶಾಲಾ ಕಾಲೇಜು ಮಕ್ಕಳು ಸಾವನಪ್ಪಿರುವ ಘಟನೆಗಳು ಕೊಡಗಿನ ಪಾಲಿಗೆ ಹೊಸದೇನಲ್ಲ. ಆನೆಗಳ ದಾಳಿಯಿಂದ ಭಯಗೊಂಡು ತೋಟದ ಕೆಲಸಕ್ಕೆ ಹೋಗುವ ಕಾರ್ಮಿಕರು ಶಾಲಾ ವಿದ್ಯಾರ್ಥಿಗಳು ಭಯದಿಂದ ನಡೆದಾಡುವ ಪರಿಸ್ಥಿತಿ ಕೊಡಗಿನ ನಾನಾ ಭಾಗಗಳಲ್ಲಿ ಕಂಡುಬರುತ್ತಿದೆ. ಕಾಡಿನಲ್ಲಿ ಹಾಗೂ ತೋಟಗಳಲ್ಲಿ ವಾಸ್ತವ್ಯ ಹೂಡುತ್ತಿದ್ದ ಕಾಡಾನೆಗಳು ಈಗ ಗ್ರಾಮಗಳಿಗೆ, ಮನೆಗಳ ಸಮೀಪಕ್ಕೆ ಲಗ್ಗೆ ಇಡುತ್ತಿವೆ. ಈ ಘಟನೆ ನಡೆದಿರುವುದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ಬೆಳ್ಳಂ ಬೆಳಿಗ್ಗೆ ಕಾಡಾನೆ  ಗುಂಪೊಂದು ಪ್ರತ್ಯಕ್ಷವಾಗಿ ಗ್ರಾಮದ ಜನರನ್ನು ಭಯಭೀತರನ್ನಾಗಿ ಮಾಡಿದೆ. ಇನ್ನೂ ಕಾಡಾನೆಗಳು ಸ್ಥಳೀಯ ನಿಡ್ತ ಮೀಸಲು ಅರಣ್ಯದಿಂದ  ಹಾದಿ ತಪ್ಪಿ ಬಂದ ಆನೆಗಳು ಗ್ರಾಮದಲ್ಲಿ ಅಡ್ಡಾದಿಡ್ಡಿ ಓಡಾಡಿವೆ. ಆನೆಗಳನ್ನು ಕಂಡು ಭಯಭೀತರಾಗಿ ಸ್ಥಳೀಯರು ಮಹಡಿಯೇರಿದ ಘಟನೆಗಳು ನಡೆದಿದೆ. ಜನರ ಚೀರಾಟ ಕೇಳಿ ಆನೆಗಳು ಮತ್ತೆ ಕಾಡಿನೆಡೆಗೆ ಓಡಿವೆ. (ವರದಿ: ಎಸ್.ಎನ್,ಎಲ್.ಜಿ)

Leave a Reply

comments

Related Articles

error: