ಮೈಸೂರು

ಅತ್ತೆ-ಸೊಸೆಯರ ಅಡುಗೆ ಸ್ಪರ್ಧೆ

ದಸರಾ ಆಹಾರ ಮೇಳ ಉಪ ಸಮಿತಿಯು ಅತ್ತೆ-ಸೊಸೆಯರಿಗಾಗಿ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಅಡುಗೆ ಸ್ಪರ್ಧೆಯನ್ನು ಏರ್ಪಡಿಸಿತ್ತು. ಅತ್ತೆ-ಸೊಸೆಯಂದಿರು ಜೋಳದರೊಟ್ಟಿ-ಎಣ್ಣೆಗಾಯಿ ತಯಾರಿಸಿದರು. ಸ್ಪರ್ಧೆಯಲ್ಲಿ ಆಲನಹಳ್ಳಿಯ ಗೌರಮ್ಮ(ಅತ್ತೆ)-ಭವ್ಯಾ(ಸೊಸೆ) ಪ್ರಥಮ, ವಿದ್ಯಾರಣ್ಯಪುರಂನ ಪುಷ್ಪಾ-ನಿರ್ಮಲಾ ದ್ವಿತೀಯ, ಕುವೆಂಪುನಗರದ ಅನಿತಾ-ಯಶಿಕಾ ತೃತೀಯ, ಕುವೆಂಪುನಗರದ ಲಲಿತಾ-ಸಚಿತಾ ನಾಲ್ಕನೇ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ಕೇವಲ ನಾಲ್ಕು ಅತ್ತೆ-ಸೊಸೆಯರು ಮಾತ್ರ ಭಾಗವಹಿಸಿದ್ದರಿಂದ, ಎಲ್ಲರಿಗೂ ಬಹುಮಾನ ಸಿಕ್ಕಿತು.

ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಣಾಧಿಕಾರಿ ಸರಳಾ ನಾಯರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಪುಟ್ಟಸ್ವಾಮಿ, ಮೈಸೂರು ವಿವಿ ಆಹಾರ ವಿಜ್ಞಾನ ವಿಭಾಗದ ಉಪನ್ಯಾಸಕಿ ಪ್ರೊ. ಅನಿತಾ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

Leave a Reply

comments

Related Articles

error: