ಕರ್ನಾಟಕಪ್ರಮುಖ ಸುದ್ದಿ

ಜಂತಕಲ್ ಮೈನಿಂಗ್ ಪ್ರಕರಣ ಸರ್ಕಾರಕ್ಕೆ ಸಂಬಂಧವಿಲ್ಲ : ಬಸವರಾಜರಾಯರೆಡ್ಡಿ

ಪ್ರಮುಖಸುದ್ದಿ,ರಾಜ್ಯ(ರಾಯಚೂರು) ಮೇ.20:- ಜಂತಕಲ್ ಮೈನಿಂಗ್ ಪ್ರಕರಣ ಸರ್ಕಾರಕ್ಕೆ ಸಂಬಂಧವಿಲ್ಲ. ಅದು ಲೋಕಾಯುಕ್ತರ ಪ್ರಕರಣವಾಗಿದ್ದು, ಎಸ್ ಐ ಟಿ ಅದನ್ನು ತನಿಖೆ ನಡೆಸುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ತಿಳಿಸಿದರು.
ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ  ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿ ಅವರು ಏನೋ ಒಂದು ಆರೋಪ ಮಾಡಬೇಕಾಗಿದ್ದರಿಂದ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಪ್ರಕರಣಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಸಸ್ಪಷ್ಟಪಡಿಸಿದರು.ವಿಶ್ವ ವಿದ್ಯಾಲಯಗಳ ಪ್ರಾಧ್ಯಾಪಕರ ನೇಮಕದ ನಿಯಮಾವಳಿಗಳನ್ನು, ಶೀಘ್ರದಲ್ಲಿ ರೂಪಿಸಲಾಗುವುದು. ಆ ನಂತರ ನೇಮಕ ಪ್ರಕ್ರಿಯೆ ನಡೆಸಲಾಗುವುದು. ಈಗಾಗಲೇ ಕಾಲೇಜಿಗೆ  2160 ಉಪನ್ಯಾಸಕರ ನೇಮಕವಾಗಿದೆ. ಇನ್ನೂ ಖಾಲಿ ಇರುವ 600 ಉಪನ್ಯಾಸಕರ ನೇಮಕಕ್ಕೆ ಮುಖ್ಯಮಂತ್ರಿ ಯವರ ಒಪ್ಪಿಗೆ ಪಡೆದು ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. 400 ಪ್ರಾಚಾರ್ಯರ ಹುದ್ದೆ ಭರ್ತಿಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ. ಜೂನ್ 1 ರಿಂದ ರಾಯಚೂರು ವಿಶ್ವವಿದ್ಯಾಲಯ ಆರಂಭವಾಗಲಿದೆ.
ಐಐಐಟಿ ರಾಯಚೂರಿಗೆ ಮಂಜೂರಾಗಿರುವುದರ ಬಗ್ಗೆ ಇದುವರೆಗೂ ಕೇಂದ್ರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ತಿಳಿಸಿದರು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: