ಕರ್ನಾಟಕಪ್ರಮುಖ ಸುದ್ದಿ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುರುಗೇಶ್ ನಿರಾಣಿ ಅಹೋರಾತ್ರಿ ಧರಣಿ

ಪ್ರಮುಖಸುದ್ದಿ, ರಾಜ್ಯ(ಬಾಗಲಕೋಟೆ) ಮೇ.21:- ಕೃಷ್ಣಾ ನದಿಗೆ ನೀರು ಬಿಡುವುದು ಸೇರಿದಂತೆ ವಿವಿಧ  ಬೇಡಿಕೆಗಳಿಗೆ ಆಗ್ರಹಿಸಿ ಬಿಜೆಪಿ ಮುಖಂಡ, ಮಾಜಿ ಸಚಿವ ಮುರುಗೇಶ ನಿರಾಣಿ ಅಹೋರಾತ್ರಿ ಧರಣಿ ನಡೆಸಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಪೋಲಿಸ ಠಾಣೆ ಎದುರು  ಹಾಕಿದ ವೇದಿಕೆಯಲ್ಲಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಧರಣಿಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಜೊತೆ ಕ್ಷೇತ್ರದ ಕಾಯ೯ಕತ೯ರು ಪಾಲ್ಗೊಂಡಿದ್ದರು. ಮುಖ್ಯವಾಗಿ ಕ್ಷೇತ್ರದಲ್ಲಿ ಕೃಷ್ಣಾ ನದಿಗೆ ನೀರು ಬಿಡಬೇಕು, ಮರಳು ಜನಸಾಮಾನ್ಯನಿಗೆ ಸಿಗುವಂತಾಗಬೇಕು ಹಾಗೂ ಕುಡಿಯುವ ನೀರು ಮತ್ತು ವಿದ್ಯುತ್ ಸಮಪ೯ಕವಾಗಿ ಪೂರೈಕೆಯಾಗಬೇಕು ಎಂಬ ಬೇಡಿಕೆಗಳನ್ನಿಟ್ಟುಕೊಂಡು  ಧರಣಿ ಸತ್ಯಾಗ್ರಹ ನಡೆಸಿದರು. ಬಳಿಕ ಬೆಳಗಿನ ಜಾವದವರೆಗೂ ಧರಣಿ ನಡೆಸಿ ಅದೇ ವೇದಿಕೆಯಲ್ಲಿ ನಿರಾಣಿ ಸಹಿತ ಎಲ್ಲ  ಕಾಯ೯ಕತ೯ರು ಮಲಗಿಕೊಳ್ಳುವುದರ ಮೂಲಕ ಗಮನ ಸೆಳೆದರು.- (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: