ಕರ್ನಾಟಕಮೈಸೂರು

ಜಲಕ್ರೀಡೆಗೆ ತೆರೆದುಕೊಂಡಿದೆ ವರುಣಾಕೆರೆ

ನೀರಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಅದರಲ್ಲೂ ನೀರಿನಲ್ಲಿ ಸಾಹಸಮಯ ಕ್ರೀಡೆಗಳನ್ನು ನಡೆಸಿದರೆ ಹೇಗಿರತ್ತೆ, ವ್ಹಾವ್ ಕೇಳಿದ್ರೇನೇ ಮೈ ರೋಮಾಂಚನಗೊಳ್ಳುತ್ತೆ ಇನ್ನು  ಅಂತಹ ಕ್ರೀಡೆಗೆ ಅವಕಾಶ ಸಿಕ್ಕಿಬಿಟ್ಟರೆ..

ಅಂತಹ ಸುವರ್ಣಾವಕಾಶವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಸರಾ ಉತ್ಸವದ ಅಂಗವಾಗಿ ವರುಣಾಕೆರೆಯಲ್ಲಿ ಪ್ರವಾಸಿಗರಿಗಾಗಿ ಆಯೋಜಿಸಿದೆ.

ಜಲಕ್ರೀಡೆಗಳು ಬೆಳಿಗ್ಗೆ 9ರಿಂದ ಆರಂಭಗೊಂಡು ಸಂಜೆ 6ರವರೆಗೆ ನಡೆಯಲಿದೆ. ಮೂರು ಜಟ್ ಸ್ಕಿ, ಹನ್ನೆರಡು ಡಬ್ಬಲ್ ಕಯಾಕ್, ಹತ್ತು ಸಿಂಗಲ್ ಕಯಾಕ್, ಎರಡು ರಾಫ್ಟ್ ಗಳು, ಎರಡು ಸ್ಪೀಡ್ ಬೋಟ್ ಗಳು, ಒಂದು ತೆಪ್ಪ, ಬನಾನ ಗಳನ್ನು ಕ್ರೀಡೆಯಲ್ಲಿ ಬಳಕೆ ಮಾಡಲಾಗುತ್ತಿದೆ.

ಇದಕ್ಕೆ ದರ ನಿಗದಿ ಪಡಿಸಲಾಗಿದ್ದು, ಒಂದೊಂದು ಕ್ರೀಡೆಗೆ 150ರಿಂದ 350ರೂ.ಗಳವರೆಗೆ ಹಣ ಪಾವತಿಸಬೇಕು. ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸಲು 800ರೂ.ಗಳ ಪ್ಯಾಕೇಜ್ ಪಡೆದುಕೊಳ್ಳಬೇಕು. ಲೈಫ್ ಜಾಕೆಟ್ ನೀಡಲಾಗುತ್ತಿದ್ದು, ಸುರಕ್ಷತೆಗಾಗಿ ಫಾರಂ ಭರ್ತಿ ಮಾಡಿಕೊಳ್ಳಲಾಗುತ್ತದೆ.

Leave a Reply

comments

Related Articles

error: