ಪ್ರಮುಖ ಸುದ್ದಿಮನರಂಜನೆಮೈಸೂರು

ಮಾಸ್ತಿಗುಡಿ ಚಿತ್ರ ಯಶಸ್ಸಿನಿಂದ ವಿಜಯಯಾತ್ರೆ : ದುನಿಯಾವಿಜಯ್

ಪ್ರಮುಖಸುದ್ದಿ,ಮೈಸೂರು,ಮೇ.21:- ಮಾಸ್ತಿಗುಡಿ ಚಿತ್ರ ಅಭೂತಪೂರ್ವ ಯಶಸ್ಸನ್ನು ಕಾಣುತ್ತಿರುವ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್ ಮೈಸೂರಿಗೆ ಆಗಮಿಸಿದ್ದರು.

ನಗರದ ವುಡ್ ಲ್ಯಾಂಡ್ಸ್ ಚಿತ್ರ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದುನಿಯಾ ವಿಜಯ್ ಮಾಸ್ತಿಗುಡಿ ಚಿತ್ರ ಯಶಸ್ಸು ಕಾಣುತ್ತಿರುವುದರಿಂದ ವಿಜಯಯಾತ್ರೆ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಗುಲ್ಬರ್ಗಾ, ಗದಗ, ಧಾರವಾಡಗಳಲ್ಲಿಯೂ ವಿಜಯಯಾತ್ರೆ ನಡೆಸಲಾಗುವುದು ಎಂದರು.

ಮೈಸೂರಿನಲ್ಲಿ ಚಿತ್ರಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಂಧದಗುಡಿ ಚಿತ್ರದ ನಂತರ ಹೆಚ್ಚು ಕಾಡಿನಲ್ಲಿ ಚಿತ್ರೀಕರಣವಾಗಿರುವ ಚಿತ್ರ ಮಾಸ್ತಿಗುಡಿಯಾಗಿದೆ. ಮಕ್ಕಳಲ್ಲಿ ಪರಿಸರ ಪ್ರೇಮ, ಕಾಡಿನ ಕುರಿತು ತಿಳಿಸಲು ಚಿತ್ರಕ್ಕೆ  50% ರಿಯಾಯಿತಿ ನೀಡಲಾಗುವುದು. ಚಿತ್ರದಲ್ಲಿ  ಕೆಲವು ದೃಶ್ಯಗಳನ್ನು ಕತ್ತರಿಸಲಾಗಿದೆ. ಕ್ಲೈಮಾಕ್ಸ್ ನಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ ಎಂದರು.

ಕನ್ನಡ ಚಿತ್ರವನ್ನು ಬೆಳೆಸಿ ಪ್ರೋತ್ಸಾಹಿಸಿ ಎಂದು ತಿಳಿಸಿದರು. ಈ ಸಂದರ್ಭ ನಟರಾದ ರವಿಶಂಕರ್, ರಂಗಾಯಣ ರಘು, ಚಿತ್ರ ನಿರ್ದೇಶಕ ನಾಗಶೇಖರ್ ಉಪಸ್ಥಿತರಿದ್ದರು. ತಮ್ಮ ನೆಚ್ಚಿನ ನಾಯಕನನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದರಲ್ಲದೇ, ಸೆಲ್ಫಿಯನ್ನೂ ತೆಗೆದುಕೊಂಡರು. – (ವರದಿ:ಬಿ.ಎಂ,ಎಸ್.ಎಚ್)

Leave a Reply

comments

Related Articles

error: