ಕರ್ನಾಟಕಪ್ರಮುಖ ಸುದ್ದಿ

ಹಸ್ತಲಾಘವ ನೀಡಿ ಉಭಯಕುಶಲೋಪರಿ ವಿಚಾರಿಸಿದ ಸಿದ್ದರಾಮಯ್ಯ-ಈಶ್ವರಪ್ಪ

ಪ್ರಮುಖಸುದ್ದಿ,ರಾಜ್ಯ(ಹಾಸನ) ಮೇ.21:- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಪರಸ್ಪರ ಹಸ್ತಲಾಘವ ನೀಡಿದರು. ಇಬ್ಬೂ ಪರಸ್ಪರ ಉಭಯಕುಶಲೋಪರಿಗಳನ್ನು ಮಾತನಾಡುತ್ತಾ ವೇದಿಕೆಯೇರಿದರು. ಹಸನ್ಮುಖರಾಗಿಯೇ ಇಬ್ಬರೂ ಮಾತನಾಡುತ್ತಿದ್ದುದು ವಿಶೇಷವಾಗಿತ್ತು. ಇಂಥಹ ಅಪರೂಪದ ದೃಶ್ಯ ಕಂಡು ಬಂದಿದ್ದು ಹಾಸನದಲ್ಲಿ ನಡೆದ ಸಮಾವೇಶದಲ್ಲಿ.

ಹಾಸನದ ಕ್ರೀಡಾಂಗಣದಲ್ಲಿ ಆಯೋಜಿಸಲಾದ  ರಾಜ್ಯಮಟ್ಟದ ಕುರುಹೀನಶೆಟ್ಟಿ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ಸಂದರ್ಭ ಸಚಿವ ರಾಮಲಿಂಗಾರೆಡ್ಡಿ, ಎ. ಮಂಜು, ಚಿತ್ರನಟ ನೆನಪಿರಲಿ ಪ್ರೇಮ್  ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕುರುಹೀನಶೆಟ್ಟಿ ಸಮಾಜದ ವತಿಯಿಂದ ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: