ಮೈಸೂರು

ಬೀಜ ಮತ್ತು ಭೂಮಿ, ದೇಹ ರಾಜಕಾರಣ ಕೃತಿ ಬಿಡುಗಡೆ

ಮೈಸೂರು, ಮೇ ೨೧: ಸಂವಹನ ಪ್ರಕಾಶಕರು ಸಂಸ್ಥೆ ವತಿಯಿಂದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಶಿವರಾಮು ಕಾಡನಕುಪ್ಪೆ ಅವರ ರಚನೆಯ ಬೀಜ ಮತ್ತು ಭೂಮಿ ಹಾಗೂ ಪ್ರಜಾವಾಣಿ ದಿನಪತ್ರಿಕೆ ಸಹ ಸಂಪಾದಕಿ ಸಿ.ಜಿ.ಮಂಜುಳ ಅವರು ಬರೆದಿರುವ ದೇಹ ರಾಜಕಾರಣ ಕೃತಿಗಳನ್ನು ಭಾನುವಾರ ಬಿಡುಗಡೆ ಮಾಡಲಾಯಿತು.
ನಗರದ ಜೆ.ಎಲ್ ರಸ್ತೆಯಲ್ಲಿರುವ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕವಿತಾ ರೈ ದೇಹ ರಾಜಕಾರಣ ಕೃತಿ ಕುರಿತು ಮಾತನಾಡಿದರು. ಬೀಜ ಮತ್ತು ಭೂಮಿ ಕೃತಿ ಕುರಿತು ಮಾತನಾಡಿದ ಜೆಎಸ್‌ಎಸ್ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ನಂದೀಶ್ ಹಂಚೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಾಜವಾದಿ ಪ.ಮಲ್ಲೇಶ, ಕನ್ನಡ ಕ್ರಿಯಾ ಸಮಿತಿ ಕಾರ್ಯದರ್ಶಿ ಸ.ರ.ಸುದರ್ಶನ, ಪ್ರೊ.ಕಾಳಚನ್ನೇಗೌಡ, ಪ್ರೊ.ಪಂಡಿತಾರಾಧ್ಯ, ಹಿರಿಯ ಸಾಹಿತಿಗಳಾದ ಮಲೆಯೂರು ಗುರುಸ್ವಾಮಿ, ಡಾ.ವಿ.ಮುನಿವೆಂಕಟಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: