ಕರ್ನಾಟಕಕ್ರೀಡೆ

ಬಳ್ಳಾರಿ ಟಸ್ಕರ್ಸ್ ಕೆಪಿಎಲ್ ಟಿ-20 ಚಾಂಪಿಯನ್

ಹುಬ್ಬಳ್ಳಿ: ಸೈಕಲ್ ಪ್ಯೂರ್ ಅಗರ್ಬತ್ತೀಸ್ ಪ್ರಾಯೋಜಿತ ಕಾರ್ಬನ್ ಕೆಪಿಎಲ್‍ನ 5ನೇ ಟಿ20 ಪಂದ್ಯಾವಳಿಯ ಚಾಂಪಿಯನ್‍ ಆಗಿ ನಟಿ ರಾಗಿಣಿ ದ್ವಿವೇದಿ ಸಹ ಮಾಲೀಕತ್ವದ ಬಳ್ಳಾರಿ ಟಸ್ಕರ್ ತಂಡವು ಚಾಂಪಿಯನ್‍ ಆಗಿ ಹೊರಹೊಮ್ಮಿದೆ. ಭಾನುವಾರ ರಾಜ್‍ನಗರದ ಕೆಎಸ್‍ಸಿಎ ಸ್ಟೇಡಿಯಂನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಬಳ್ಳಾರಿ ತಂಡವು 35 ರನ್‍ಗಳಿಂದ ಹುಬ್ಬಳ್ಳಿ ತಂಡವನ್ನು ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ ಟಸ್ಕರ್ 5 ವಿಕೆಟ್‍ಗೆ 189 ರನ್‍ ದಾಖಲಿಸಿತು. ಹುಬ್ಬಳ್ಳಿ ಟೈಗರ್ಸ್ ತಂಡ 9 ವಿಕೆಟ್‍ಗೆ 154 ಗಳಿಸುವ ಮೂಲಕ ಸೋಲನ್ನನುಭವಿಸಿತು.

ಮೊತ್ತ ಬೆನ್ನಟ್ಟಿದ್ದ ಹುಬ್ಬಳ್ಳಿ ತಂಡದ ಪರ ಉತ್ತಮ ಜತೆಯಾಟವೇ ಇರಲಿಲ್ಲ. 4ನೇ ವಿಕೆಟ್‍ಗೆ ಕುನಾಲ್ ಕಪೂರ್(27) ಹಾಗೂ ದಿಕ್ಷಾಂಶು ನೇಗಿ(39) ಕೂಡಿಸಿದ 39 ರನ್‍ಗಳೇ ತಂಡದ ಗರಿಷ್ಠ ರನ್‍ಗಳು. 2ನೇ ವಿಕೆಟ್‍ಗೆ ಮೊಹಮದ್ ತಾಹ(36) ಹಾಗೂ ಕುನಾಲ್ 30 ರನ್ ಗಳಿಸಿದ್ದರು.

ಬಳ್ಳಾರಿಗೆ 10 ಲಕ್ಷ ರು. ಬಹುಮಾನ: ಟೂರ್ನಿಯಲ್ಲಿ ಚಾಂಪಿಯನ್ ಬಳ್ಳಾರಿ ಟಸ್ಕರ್ಸ್ ತಂಡ 10 ಲಕ್ಷ ರು. ನಹುಮಾನ ಪಡೆಯಿತು. ರನ್ನರ್‍ ಅಪ್‍ ಹುಬ್ಬಳ್ಳಿ 5 ಲಕ್ಷ ರು. ಹಾಗೂ ಸೆಮಿಫೈನಲ್‍ನಲ್ಲಿ ಸೋತ ತಂಡಗಳಾದ ಬೆಳಗಾವಿ ಪ್ಯಾಂಥರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ತಲಾ 2.5 ಲಕ್ಷ ರು. ಪಡೆದವು.

 

Leave a Reply

comments

Related Articles

error: