ಕರ್ನಾಟಕದೇಶಪ್ರಮುಖ ಸುದ್ದಿಮೈಸೂರು

ಕಾವೇರಿ ನಿರ್ವಹಣಾ ಮಂಡಳಿ ರಚಿಸುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್‍ಗೆ ಕೇಂದ್ರ ಸರ್ಕಾರ ಪ್ರಮಾಣಪತ್ರ

ನವದೆಹಲಿ: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವ ಅಗತ್ಯವಿಲ್ಲವೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿದೆ. ಈ ಮೂಲಕ ಕಾವೇರಿ ಜಲವಿವಾದದಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿದಂತಾಗಿದ್ದು, ಕರ್ನಾಟಕ ಜನತೆ ಸದ್ಯಕ್ಕೆ ಸಮಾಧಾನಪಟ್ಟುಕೊಳ್ಳಬಹುದಾಗಿದೆ.

ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಅವರು ಸೋಮವಾರ ಕೇಂದ್ರ ಸರ್ಕಾರದ ಪರವಾಗಿ ಪ್ರಮಾಣಪತ್ರ ಸಲ್ಲಿಸಿದ್ದು, “ಶಾಸನ ರಚಿಸುವುದು ಸಂಸತ್ತಿನ ಜವಾಬ್ದಾರಿಯಾಗಿದೆ. ಸುಪ್ರೀಂ ಕೋರ್ಟ್‍ ಇಂತಹ ಆದೇಶ ನೀಡಲು ಅವಕಾಶವಿಲ್ಲ” ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಇದರಿಂದಾಗಿ ಸುಪ್ರೀಂ ಕೋರ್ಟ್‍ ಆದೇಶಕ್ಕೆ ಶಾಸಕಾಂಗ ತಡೆ ಒಡ್ಡಿದಂತಾಗಿದ್ದು, ಕೇಂದ್ರ ಸರ್ಕಾರವು ಸಕಾಲಿಕ ಮಧ್ಯಪ್ರವೇಶ ಮಾಡಿ ತನ್ನ ಅಭಿಪ್ರಾಯ ತಿಳಿಸಿರುವುದರಿಂದ ಉಂಟಾಗಬಹುದಾಗಿದ್ದ ಕರ್ನಾಟಕ ಶಾಸಕಾಂಗ ಮತ್ತು ನ್ಯಾಯಾಂಗದ ಸಂಘರ್ಷಕ್ಕೆ ತಡೆ ತಡೆಒಡ್ಡಿದಮತಾಗಿದೆ.

Leave a Reply

comments

Related Articles

error: