ಮೈಸೂರು

ಪೊಲೀಸ್ ಕ್ಯಾಂಟೀನ್ ಗೆ ಚಾಲನೆ ನೀಡಿದ ರವಿ.ಡಿ.ಚನ್ನಣ್ಣನವರ್

ಮೈಸೂರು, ಮೇ.21:- ಕೊನೆಗೂ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಟ್ಟರು. ತನ್ನ ಸಹೋದ್ಯೋಗಿಗಳ ಅನುಕೂಲಕ್ಕಾಗಿ ಜ್ಯೋತಿನಗರದ ಡಿ.ಆರ್.ಗ್ರೌಂಡ್  ಬಳಿ ನೂತನವಾಗಿ ನಿರ್ಮಿಸಲಾದ ಪೊಲೀಸ್ ಕ್ಯಾಂಟೀನ್ ಗೆ ಭಾನುವಾರ ಚಾಲನೆ ನೀಡಿದರು.

ಭಾನುವಾರ ಬೆಳಿಗ್ಗೆ ಸುಮುಹೂರ್ತದಲ್ಲಿ ದೇವರ ಪೂಜೆ, ಹಾಗೂ ಹೋಮವನ್ನು ನೆರವೇರಿಸುವ  ಮೂಲಕ ಕ್ಯಾಂಟೀನ್ ಗೆ ಚಾಲನೆ ನೀಡಿದರು. ಸಹೋದ್ಯೋಗಿಗಳು ಬಿಡುವಿಲ್ಲದೇ ಕೆಲಸದಲ್ಲಿ ನಿರತರಾಗುತ್ತಿದ್ದು ಅವರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದು, ಪೊಲೀಸರು ಈ ಸೇವೆಯನ್ನು ಪಡೆದುಕೊಳ್ಳಿ ಎಂದು ರವಿ.ಡಿ.ಚನ್ನಣ್ಣನವರ್ ತಿಳಿಸಿದ್ದಾರೆ. ಈ ಸಂದರ್ಭ ಪೊಲೀಸ್ ಸಿಬ್ಬಂದಿಗಳು, ಕೆಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ರೀತಿಯ ಪೊಲೀಸರು ಎಲ್ಲೆಡೆಯೂ ಇದ್ದರೆ ಪೊಲೀಸರಿಗೆ ತುಂಬಾನೇ ಅನುಕೂಲವಾಗಲಿದೆ. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: