ದೇಶಪ್ರಮುಖ ಸುದ್ದಿ

46 ರೈಫಲ್ಸ್ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ಯತ್ನ: ಇಬ್ಬರು ಉಗ್ರರ ಹತ್ಯೆ

ನವದೆಹಲಿ: ಉರಿ ದಾಳಿಗೆ ಭಾರತದ ಪ್ರತಿಕಾರದಿಂದ ಕಂಗೆಟ್ಟಿರುವ ಪಾಕಿಸ್ತಾನ ಪದೇಪದೆ ಅಕ್ರಮ ನುಸುಳುವಿಕೆ ಯತ್ನಗಳನ್ನು ಮಾಡುತ್ತಲೇ ಇದೆ. ಕಾಶ‍್ಮೀರದ ಬಾರಾಮುಲ್ಲಾದಲ್ಲಿರುವ 46 ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರದ ಮೇಲೆ ಫಿದಾಯಿನ್(ಆತ್ಮಹತ್ಯಾ) ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ಮೊತ್ತೊಬ್ಬ ಉಗ್ರ ಪ್ರಾಣ ಉಳಿಸಿಕೊಳ್ಳಲು ಝೇಲಂ ನದಿಗೆ ಹಾರಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

ಬಾರಾಮುಲ್ಲಾದಲ್ಲಿರುವ ಪಾರ್ಕ್‍ ಮೂಲಕ ಸೇನಾ ಶಿಬಿರದ ಮೇಲೆ ದಾಳಿ ನಡೆಸಲು ಉಗ್ರರು ಹೊಂಚುಹಾಕುತ್ತಿದ್ದು. ಪಹರೆ ನಡೆಸುತ್ತಿದ್ದ ಯೋಧರು ಅವರ ಯತ್ನವನ್ನು ವಿಫಲಗೊಳಿಸಿದ್ದಲ್ಲದೆ, ಅವರ ಮೇಲೆ ಗುಂಡಿನ ಮಳೆಗೆರೆದು ಇಬ್ಬರನ್ನು ಯಮಪುರಿಗೆ ಕಳುಹಿಸಿದ್ದು, ಇನ್ನೊಬ್ಬ ಉಗ್ರ ಪ್ರಾಣ ಉಳಿಸಿಕೊಳ್ಳಲು ಬಾರಾಮುಲ್ಲಾ ತೊರೆದಿದ್ದಾನೆ ಎನ್ನಲಾಗಿದೆ.

ಈ ಘಟನೆಯಲ್ಲಿ ಓರ್ವ ಬಿಎಸ್‍ಎಫ್ ಯೋಧ ಹುತಾತ್ಮರಾಗಿದ್ದು, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಕ್ರಮ ನುಸುಳುವಿಕೆ ಯತ್ನ ವಿಫಲ: ಪಂಜಾಬ್‍ನ ಗುರುದಾಸ್‍ಪುರದ ಬಿಸಿಎಫ್ ಚಾಕ್ರಿ ಪೋಸ್ಟ್‍ನಲ್ಲಿ ಸೋಮವಾರ ಬೆಳಗ್ಗೆಯೇ ಗುಂಡಿನ ಮೊರೆತ ಕೇಳಿಬಂದಿದೆ.

ಚಾಕ್ರಿ ಫೋಸ್ಟ್ ಬಳಿ ಅಕ್ರಮ ನುಸುಳುವಿಕೆ ಯತ್ನ ನಡೆದಿದ್ದು, ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಬಿಎಸ್ಎಫ್‍ ಇನ್ಸ್‍ಪೆಕ್ಟರ್ ಜನರಲ್ ಅನಿಲ್ ಪ್ಯಾಲಿವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Leave a Reply

comments

Related Articles

error: