ಮೈಸೂರು

ಉದ್ಯೋಗ ವಿನಿಮಯ ಕೇಂದ್ರದಲ್ಲಿ ಉದ್ಯೋಗ ಮೇಳ

ಮೈಸೂರು, ಮೇ.22:- ನಗರದ ಎನ್.ಆರ್.ಮೊಹಲ್ಲಾದಲ್ಲಿರುವ  ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಸಹಾಯಕ ನಿರ್ದೇಶಕರ ಕಚೇರಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಸೋಮವಾರ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.

ಉದ್ಯೋಗ ಮೇಳದಲ್ಲಿ ಸುರಭಿ ಪ್ಲಾನ್ ಟೆಕ್ ಮೈಸೂರು, ಬಿ.ಎನ್.ಗೌಡ ಎಂಟರ್ ಪ್ರೈಸಸ್,  ಯುರೇಕಾಪೋರ್ಬ್ಸ್, ತೇಜಸ್ವಿನಿ ಎಂಟರ್ ಪ್ರೈಸಸ್,  ರಿಟೇಲ್ ವರ್ಕ್ಸ್ ಇಂಡಿಯಾ, ಹಿಂದೂಜಾ ಗ್ಲೋಬಲ್ ಸಲ್ಯೂಷನ್, ರಾಜಾ ಬಯೋಟೆಕ್, ರ್ಯಾಮಕ್ ಮಂಡ್ ಟೆಕ್ನಾಲಜಿ, ಗ್ರಾಸ್ ರೋಟ್ ಹಾಗೂ ಇನ್ನಿತರೇ ಖಾಸಗಿ ಕಂಪನಿಗಳು ಭಾಗವಹಿಸಿವೆ. ಎಸ್.ಎಸ್.ಎಲ್.ಸಿ ಉತ್ತೀರ್ಣ ಅಥವಾ ಅನುತ್ತೀರ್ಣ, ಪಿಯುಸಿ, ಜೆಒಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕ ಸಿ.ವಿಶ್ವನಾಥ ಭರಣಿ, ನಿಯೋಜಕ ಶಿವಲಿಂಗೇಗೌಡ, ಸಂಯೋಜಕ ಜುಲ್ಫಿಕಾರ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಸುಮಾರು 300ಕ್ಕೂ ಅಧಿಕ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. (ವರದಿ:ಹೆಚ್.ಎನ್,ಕೆ.ಎಸ್,ಎಸ್.ಎಚ್)

Leave a Reply

comments

Related Articles

error: