ಕರ್ನಾಟಕಪ್ರಮುಖ ಸುದ್ದಿ

ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕಾರಣ : ಗೋವಿಂದ ಕಾರಜೋಳ

ರಾಜ್ಯ,(ಬಾಗಲಕೋಟ)ಮೇ.22:- ಮುಖ್ಯಮಂತ್ರಿ  ಸಿದ್ದರಾಮಯ್ಯ ಮತ್ತು ಖರ್ಗೆ ಅವರಿಗೆ ಮಾನ ಮರ್ಯಾದೆ ಇಲ್ಲ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಬಾಗಲಕೋಟದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು  ದಲಿತರ ಮನೆ ಊಟದ ವಿಚಾರಕ್ಕೆ ಸಂಬಂಧಿಸಿದಂತೆ  ಕಾಂಗ್ರೆಸ್  ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ಮುಖ್ಯಮಂತ್ರಿಗಳ  ಸ್ವಂತ ಜಿಲ್ಲೆಯಲ್ಲಿಯೇ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ನಾವು ಮಾಡಿದ್ದು ದಲಿತರ ಮನೆಯ ಊಟವನ್ನೇ. ಹೆಚ್ಚಿನ ಜನರಿಗೆ ಬೇಕಾದಾಗ ಹೊಟೇಲಿನಿಂದ ತರಿಸಿದ್ದು. ಆದರೆ ನಮಗೆ ದಲಿತರೇ ಮನೆ ಊಟ ನೀಡಿದ್ದಾರೆ ಎಂದರು. ಅಂಬೇಡ್ಕರ್ ಸಾವಿನಲ್ಲಿ ರಾಜಕಾರಣ ಮಾಡಿದ ಕಾಂಗ್ರೆಸ್ ನಲ್ಲಿ ಖರ್ಗೆ ಒಂದು ತಾಸು ಕೂಡ ಇರೋದು ಸರಿಯಲ್ಲ. ಉಪಹಾರದ ಕುರಿತು ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಬಿತ್ತರಿಸಿದ್ದು ಸರಿಯಲ್ಲ ಎಂದರು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: