ಕರ್ನಾಟಕಪ್ರಮುಖ ಸುದ್ದಿ

ಸಿಎಂ ಖಾಸಗಿ ಸಮೀಕ್ಷೆ : ಜಯಪ್ರಿಯತೆ ಕುಸಿದಿರುವ ಶಾಸಕರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಸಿಗಲ್ಲ?

ರಾಜ್ಯ (ಪ್ರಮುಖ ಸುದ್ದಿ) ಬೆಂಗಳೂರು, ಮೇ 22 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರಾವರು ಖಾಸಗಿ ಸಮೀಕ್ಷೆ ತರಿಸಿಕೊಂಡಿದ್ದು ಸಮೀಕ್ಷೆಯಲ್ಲಿ ಜನಪ್ರಿಯತೆ ಕಳೆದುಕೊಂಡಿರುವ ಶಾಸಕರು, ಕೆಲಸ ಮಾಡದ ಸಚಿವರಿಗೆ ಮುಂದಿನ ವಿಧಾಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.

ಮುಂದಿನ ಚುನಾವಣೆಗೆ ನನ್ನದೇ ನಾಯಕತ್ವ ಎಂದು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯ ಇದಕ್ಕಾಗಿ ತಯಾರಿ ನಡೆಸುತ್ತಿದ್ದು, ಖಾಸಗಿ ಸಮೀಕ್ಷಾ ಸಂಸ್ಥೆಯ ಮೂಲಕ ವರದಿ ತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಹಲವಾರು ಹಾಲಿ ಶಾಸಕರು, ಸಚಿವರು ಟಿಕೆಟ್ ಪಡೆಯುವುದು ಕಷ್ಟ ಎಂದು ಹೇಳಲಾಗುತ್ತಿದೆ.

ಅವಧಿಗೂ ಮುನ್ನ ಚುನಾವಣೆ ಬರುವುದೇ ?

ಪ್ರಸ್ತುತ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಪ್ರಸ್ತುತ ಭಿನ್ನಮತ ತಲೆದೋರಿದ್ದು, ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಲೆಕ್ಕ ಹಾಕಿರುವ ಸಿಎಂ, ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆಸಲು ಒಳಗೊಳಗೇ ತಯಾರಿ ನಡೆಸಿದ್ದಾರಾ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಸಮೀಕ್ಷೆ ಇಷ್ಟಕ್ಕೇ ಸೀಮಿತವಾಗಿಲ್ಲ. ಯಾವ ನಾಯಕರಿಗೆ ಎಷ್ಟು ಜನಪ್ರಿಯತೆ ಇದೆ? ಸಿಎಂ ಅಧಿಕಾರದಲ್ಲಿ ಮುಂದುವರಿಯಬೇಕೆ? ಖರ್ಗೆ ಅವರು ಮುಖ್ಯಮಂತ್ರಿಯಾದರೆ ಹೇಗೆ? ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆಯೆ? ಎಂಬುದೂ ಸೇರಿದಂತೆ ಹಲವಾರು ದೃಷ್ಟಿಕೋನಗಳಲ್ಲಿ ಖಾಸಗಿ ಸಮೀಕ್ಷಕರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸಮೀಕ್ಷೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಸೂಚಿಸಲಾಗಿದ್ದು ವರದಿ ಬಂದ ನಂತರ ಇನ್ನಷ್ಟು ಪರಿಣಾಮಕಾರಿಯಾಗಿ ಪಕ್ಷದ ಕಾರ್ಯತಂತ್ರ ರೂಪಿಸಲಾಗುವುದು ಎನ್ನಲಾಗಿದೆ.

ಪ್ರತಿ 224 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ವರ್ಚಸ್ಸು, ಹಾಲಿ ಇರುವ ಶಾಸಕರ ಜನಪ್ರಿಯತೆ, ಸಚಿವರು ಮಾಡಿರುವ ಕೆಲಸಗಳ ಬಗ್ಗೆ ಸಮೀಕ್ಷಕರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೊಡುವುದು ವಾಡಿಕೆ. ಆದರೆ, ಸಮೀಕ್ಷೆಯಲ್ಲಿ ಅವರು ಜನಪ್ರಿಯತೆ ಕಳೆದುಕೊಂಡಿದ್ದರೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

-ಎನ್.ಬಿ.ಎನ್.

Leave a Reply

comments

Related Articles

error: