ಕರ್ನಾಟಕದೇಶಪ್ರಮುಖ ಸುದ್ದಿಮೈಸೂರು

ಸಂಸತ್ತಿನ ಒಪ್ಪಿಗೆ ಇಲ್ಲದೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಾಧ್ಯವಿಲ್ಲ: ಸದಾನಂದ ಗೌಡ

ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಶಾಸಕಾಂಗದ ಮೇಲೆ ಒತ್ತಡ ಹೇರಲು ಸುಪ್ರೀಂಕೋರ್ಟ್‍ಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

ಹೀಗಾಗಿ ಸುದ್ದಿಗಾರರನ್ನುದ್ದೇಶಿ ಮಾತನಾಡುತ್ತಿದ್ದ ಅವರು, ಇಂತಿಷ್ಟೇ ಸಮಯದಲ್ಲಿ ಇಂಥದ್ದೇ ಕಾನೂನು ರಚನೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವ ಅಧಿಕಾರ ಸುಪ್ರೀಂ ಕೊರ್ಟ್‍ ಗೆ ಇಲ್ಲ. ಕಾವೇರಿ ನದಿ ಪಾತ್ರದ ನಾಲ್ಕೂ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಕರ್ನಾಟಕ ಮತ್ತು ತಮಿಳುನಾಡು ವಾದವನ್ನು ಮಾತ್ರ ಆಲಿಸಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶ ನೀಡಲಾಗಿದ್ದು, ಇದು ಕೂಡ ಕಾನೂನಾತ್ಮಕ ಲೋಪವಾಗಿದೆ. ಹೀಗಾಗಿ ಅಟಾರ್ನಿ ಜನರಲ್ ಮುಕುಲ್ ರೊಹ್ನಟಿ ಅವರು ಸುಪ್ರೀಂ ಕೋರ್ಟ್‍ ಗೆ ಸಲ್ಲಿರುವ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರದ ನಿಲುವು ಕುರಿತ ಟಿಪ್ಪಣಿ ಸಲ್ಲಿದ್ದಾರೆ ಎಂದು ಸದಾನಂದಗೌಡ ತಿಳಿಸಿದರು.

Leave a Reply

comments

Related Articles

error: