ಪ್ರಮುಖ ಸುದ್ದಿಮೈಸೂರು

ಮಾವುತರ ಮಕ್ಕಳಿಗೆ ಶಿಕ್ಷಣ ಕಿಟ್ ವಿತರಣೆ

ಅರಮನೆ ಆವರಣದಲ್ಲಿ  ನಾಡಹಬ್ಬ ದಸರಾ ಪ್ರಯುಕ್ತ ಮಾವುತರ ಮಕ್ಕಳಿಗೆ ಬೆಳಗಾಂ ಮಹೇಶ್ ಫೌಂಡೇಶನ್ ವತಿಯಿಂದ ಶಿಕ್ಷಣಕ್ಕೆ ಸಂಬಂಧಿಸಿದ ಕಿಟ್ ವಿತರಿಸಲಾಯಿತು.

ರಾಜ್ಯ ಅರಣ್ಯ ಇಲಾಖೆ, ಮೈಸೂರು ಸಾರ್ವಜನಿಕ ಗ್ರಂಥಾಲಯ ಮತ್ತು ಸಾರ್ವಜನಿಕ ಮಾಹಿತಿ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹೇಶ್ ಫೌಂಡೇಶನ್ ಮುಖ್ಯಸ್ಥ ಮಾತನಾಡಿ ಮಾವುತರ ಮಕ್ಕಳು ಇಲ್ಲಿಯೇ ಟೆಂಟ್ ಶಾಲೆಯಲ್ಲಿ ಓದುತ್ತಿದ್ದಾರೆ. ಅವರ ಶಿಕ್ಷಣಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು ಎನ್ನುವ ದೃಷ್ಟಿಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಪರಿಕರಗಳನ್ನು ಕಿಟ್ ರೂಪದಲ್ಲಿ ವಿತರಿಸಲಾಗಿದೆ ಎಂದರು.

ಈ ಸಂದರ್ಭ ಅರಣ್ಯಾಧಿಕಾರಿಗಳಾದ ದೇವರಾಜ್, ಗಣೇಶ್ ಭಟ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: