ಪ್ರಮುಖ ಸುದ್ದಿಮೈಸೂರು

ದೇವರಾಜ ಅರಸು ಮಾರುಕಟ್ಟೆಯ ಭವಿಷ್ಯಇಂದು ನಿರ್ಧಾರ

ಇತ್ತೀಚೆಗೆ ಪತನಗೊಂಡ ಪಾರಂಪರಿಕ ಕಟ್ಟಡ ದೇವರಾಜ ಅರಸು ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡದ ಹಣೆಬರಹ ಇಂದು ನಿರ್ಧಾರವಾಗಲಿದೆ. ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ ತಜ್ಞರ ತಂಡ ಮಾಹಿತಿಗಳನ್ನು ಕಲೆ ಹಾಕಿತ್ತು. ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ವರದಿಗಾಗಿ ಶಿಫಾರಸು ಮಾಡಿದ್ದಾರೆ.

ರಾಜ್ಯ ಟಾಸ್ಕಫೋರ್ಸ್ ಕಮಿಟಿಯು ಇಟ್ಟಿಗೆ, ಮಣ್ಣು ಸೇರಿದಂತೆ ವಿವಿಧ ವಸ್ತುಗಳನ್ನು ಕಲೆ ಹಾಕಿ ಎಸ್.ಜೆ.ಸಿ.ಇ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಕಮಿಟಿಯು ಲ್ಯಾನ್ಸ್ ಡೌನ್ ಕಟ್ಟಡವನ್ನು ದುರಸ್ತಿ ನಡೆಸುವ ಕುರಿತಂತೆ ಸಲಹೆ ನೀಡಿತ್ತು. ಬಳಿಕ ಪಾರಂಪರಿಕ ಮೌಲ್ಯವನ್ನು ಉಳಿಸುವ ನಿಟ್ಟಿನಲ್ಲಿ ಪುನರ್ ನಿರ್ಮಾಣ ಮಾಡುವಂತೆಯೂ ತಿಳಿಸಿತ್ತು.

ಪರೀಕ್ಷೆಯ ಬಳಿಕ ಹಳೆಯ ಕಟ್ಟಡವನ್ನು ಉಳಿಸಿಕೊಳ್ಳುವ ಯಾವ ಸದಾಶಯಗಳೂ ಉಳಿಯದೆ ನೆಲಸಮಗೊಳಿಸುವಂತೆ ಕಾಣಿಸುತ್ತಿದೆ. ಪ್ರಯೋಗಾಲಯದಿಂದ ಫಲಿತಾಂಶ ದೊರಕಿದ ಬಳಿಕವಷ್ಟೇ ನಿರ್ಧಾರ ತಿಳಿಯಲಿದೆ.

Leave a Reply

comments

Related Articles

error: