ಮೈಸೂರು

ರಂಗತರಬೇತಿಗೆ ಮೇ.28ರಂದು ಸಂದರ್ಶನ

ಮೈಸೂರು,ಮೇ.23:- ಮಂಡ್ಯರಮೇಶ್ ನೇತೃತ್ವದ ನಟನರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು, ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನ ಶೀಲವಾಗಿದೆ.
ತನ್ನಚಟುವಟಿಕೆಯ ಭಾಗವಾಗಿ ಆಸಕ್ತ ಯುವಕ ಯುವತಿಯರಿಗೆ ಅಭಿನಯ ಮತ್ತು ರಂಗತರಬೇತಿ ನೀಡುವ ನಿಟ್ಟಿನಲ್ಲಿ ಪ್ರತಿದಿನ ಸಂಜೆ 5.30ರಿಂದ 9ರ ವರೆಗೆತರಗತಿಯನ್ನು ನಡೆಸುತ್ತಿದ್ದು, 2017-18ನೇ ಸಾಲಿನ ಒಂದು ವರ್ಷದ ಕೋರ್ಸ್‍ನ ಪ್ರವೇಶ ಪ್ರಕ್ರಿಯೆ ಮತ್ತು ಅಭ್ಯರ್ಥಿಗಳ ಸಂದರ್ಶನ ಮೇ 28ರಂದು ಬೆಳಿಗ್ಗೆ 10 ಗಂಟೆಗೆ  ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನರಂಗಶಾಲೆಯಲ್ಲಿ ನಡೆಯಲಿದೆ.

ಆಸಕ್ತ ಅಭ್ಯರ್ಥಿಗಳು ಮೇ.28ರಂದು ಸಂದರ್ಶನದಲ್ಲಿ ಭಾಗವಹಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಜೂನ್ ತಿಂಗಳಿಂದ ತರಗತಿಗಳು ಪ್ರಾರಂಭವಾಗಲಿದೆ. ಅಭಿನಯ, ರಂಗ ಸಂಗೀತ, ಆಂಗಿಕ ಚಲನೆ, ಧ್ವನಿ ಬಳಕೆ, ಪ್ರಸಾಧನ, ಬೆಳಕು, ರಂಗ ವಿನ್ಯಾಸ, ಪರಿಕರ ನಿರ್ಮಾಣ, ರಂಗ ಇತಿಹಾಸ, ನಾಟಕ ತಯಾರಿ, ಪ್ರದರ್ಶನ  ಹೀಗೆ ರಂಗಭೂಮಿಯ ಬೇರೆ ಬೇರೆ ಆಯಾಮಗಳ ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿದ್ದು, ನುರಿತ ಶಿಕ್ಷಕರು ಮತ್ತು ಭಾರತದ ಪ್ರಸಿದ್ಧ ರಂಗ ನಿರ್ದೇಶಕರು ತರಬೇತಿ ನೀಡಲಿದ್ದಾರೆ. ರಂಗಭೂಮಿಯನ್ ನುಗಂಭೀರವಾಗಿ ಅಭ್ಯಸಿಸಲು ಆಸಕ್ತಿ ಇರುವ ಅಭ್ಯರ್ಥಿಗಳು, ವಿದ್ಯಾರ್ಥಿಗಳು, ಉದ್ಯೋಗಿಗಳು ಮುಂಚಿತವಾಗಿ ಅರ್ಜಿ ಪಡೆದು ಸಂದರ್ಶನದಲ್ಲಿ ಭಾಗವಹಿಸಬಹುದು. ಮಾಹಿತಿಗಾಗಿ ನಟನ ರಂಗ ಶಿಕ್ಷಕರಾದ  ಮೇಘ ಸಮೀರ (9945555570) ಅವರನ್ನುಸಂಪರ್ಕಿಸಬಹುದಾಗಿದೆ. (ವರದಿ:ಎಸ್.ಎಚ್)

Leave a Reply

comments

Related Articles

error: