ಪ್ರಮುಖ ಸುದ್ದಿಮೈಸೂರು

ಉಳಿ ಪೆಟ್ಟು ಬಿದ್ದಷ್ಟು ಶಿಲೆ ಸುಂದರ ಶಿಲ್ಪವಾಗುತ್ತದೆ : ಹೆಚ್.ಡಿ.ದೇವೇಗೌಡ

ಪ್ರಮುಖಸುದ್ದಿ, ಮೈಸೂರು,ಮೇ.23: ಸರ್ಕಾರ ಹಳೆಯ ಕೇಸ್ ಗಳನ್ನು ಕೆದಕುವ ಮೂಲಕ ಎರಡು ಪಕ್ಷಗಳಿಗೂ ತೊಂದರೆ ನೀಡುತ್ತಿದೆ.ಆದರೆ ನಾವು ಅದಕ್ಕೆ ಹೆದರುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಉಳಿ ಪೆಟ್ಟು ಬಿದ್ದಷ್ಟು ಶಿಲೆಯು ಬಲಿಷ್ಠವಾಗಿ ಸುಂದರ ಶಿಲ್ಪವಾಗಿ ಹೊರಹೊಮ್ಮತ್ತದೆ ಎಂದರು. ವಿಶ್ವನಾಥ್ ಪಕ್ಷ ಸೇರುವ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ದೇವರ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸಿದ್ದೇನೆ. ಚಾಮಾರಾಜನಗರದಿಂದ ಪಕ್ಷದ ಕೆಲಸ ಶುರುಮಾಡಿದ್ದೇನೆ.ಮೈಸೂರಿನ ಜೆಡಿಎಸ್ ಶಾಸಕರು ಪಕ್ಷ ಬಿಡುವ ವಿಚಾರ, ಉಹಾಪೋಹವಷ್ಟೆ.ಅದರ ಬಗ್ಗೆ ಹೆಚ್ಚಿನ ಚರ್ಚೆ ಬೇಡ ಎಂದು ತಿಳಿಸಿದರು. (ವರದಿ:ಆರ್.ವಿ,ಎಸ್.ಎಚ್)

Leave a Reply

comments

Related Articles

error: