ಮೈಸೂರು

ಸ್ಮಶಾನದಲ್ಲಿ ‘ಶವದ ಮುಂದೆ’ ಚಿತ್ರ ತಂಡಕ್ಕೆ ಅಭಿನಂದನೆ

ಮೈಸೂರು,ಮೇ.23:- ಚಾಮುಂಡಿ ಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ಶವದ ಮುಂದೆ ಚಿತ್ರತಂಡವನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕ, ನಿರ್ದೇಶಕ ಸ್ನೇಹಮಯಿ ಕೃಷ್ಣ, ನಾಯಕನಟ ಆರ್ಯ, ನಾಯಕಿ ಶೃತಿಗೌಡ, ಕ್ಯಾಮರಾಮನ್ ಓಂ.ಪ್ರಕಾಶ್ ಇವರನ್ನು ಅಭಿನಂದಿಸಲಾಯಿತು. ಈ ಸಂದರ್ಭ ಉಪಸ್ಥಿತರಿದ್ದ ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ ಜೀವನದ ವಾಸ್ತವಾಂಶ ತಿಳಿಸುವಂತಹ ಪವಿತ್ರವಾದ ಕ್ಷೇತ್ರ ಸ್ಮಶಾನ. ಇಲ್ಲಿ ರುದ್ರ ನೆಲೆಸಿದ್ದಾನೆ. ಇಂಥಹ ಪವಿತ್ರವಾದ ಸ್ಥಳದಲ್ಲಿ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು. ಬಡವ, ಬಲ್ಲಿದ, ಮೇಲು,ಕೀಳು ಯಾವುದೇ ಜಾತಿಭೇದವಿಲ್ಲದೇ ಎಲ್ಲರನ್ನೂ ಸಮಾಗಮಗೊಳಿಸುವ ಪವಿತ್ರ ಸ್ಥಳ ಸ್ಮಶಾನ. ಇಲ್ಲಿ ಜಾತ್ಯಾತೀತತೆ, ಭಾವೈಕ್ಯತೆಯಿದೆ. ಚಿತ್ರತಂಡ ಉತ್ತಮ ಸಂದೇಶ ನೀಡಿದೆ. ಚಿತ್ರದ ಹೆಸರು ವಿಚಿತ್ರವಾದರೂ ಪ್ರಸ್ತುತ ಜೀವನಕ್ಕೆ ಹೆಚ್ಚು ಸಮಂಜಸವಾಗಿದೆ ಎಂದರು.

ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾಬೀದಿರವಿ, ಧನಪಾಲ್, ಪ್ಯಾಲೇಸ್ ಬಾಬು, ರಾಧಾಕೃಷ್ಣ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು. (ವರದಿ:ಬಿ.ಎಂ,ಕೆ.ಎಸ್,ಎಸ್.ಎಚ್)

Leave a Reply

comments

Related Articles

error: