ಪ್ರಮುಖ ಸುದ್ದಿಮೈಸೂರು

ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ದೇವೇಗೌಡ ಭೇಟಿ

ಪ್ರಮುಖಸುದ್ದಿ ಮೈಸೂರು,ಮೇ.23:- ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಪ್ರಶಾಂತವಾದ ವಾತಾವರಣವಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಶ್ರೀಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಗಣಪತಿಸಚ್ಚಿದಾನಂದ ಸ್ವಾಮೀಜಿಯವರ 75ನೇ ಜನ್ಮದಿನೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಾಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ಸಂದರ್ಭ ಮಾತನಾಡಿದ ಅವರು ಪಿರಿಯಾಪಟ್ಟಣ ಹೋಗುತ್ತಿದ್ದೆ. ಇಲ್ಲಿ ಕಾರ್ಯಕ್ರಮವಿದೆ ಎಂದು ತಿಳಿಸಿದರು. ಅದರಿಂದ ನಾನು ಇಲ್ಲಿಗೆ ಭೇಟಿ ನೀಡಿದೆ. ಇಲ್ಲಿ ಅತ್ಯಂತ ಎತ್ತರವಾಗಿರುವ ಆಂಜನೇಯನಿದ್ದು ಎಲ್ಲರನ್ನೂ ಸಲಹುತ್ತಿದ್ದಾನೆ. ಪ್ರಶಾಂತ ವಾತಾವರಣವಿದೆ. ಶ್ರೀಗಳ ಆಧ್ಯಾತ್ಮ ಪರಿಚಯ ಇಡೀ ವಿಶ್ವಕ್ಕೇ ಇದೆ. ಅವರು ರಚಿಸಿದ ದೇವರ ಕುರಿತಾದ ಕೃತಿಗಳನ್ನು ನಾನು ಪಠಣ  ಮಾಡಿದ್ದೇನೆ ಎಂದರು. ಆಶ್ರಮದ ವತಿಯಿಂದ ದೇವೇಗೌಡರನ್ನು ಸಮ್ಮಾನಿಸಲಾಯಿತು. ಈ ಸಂದರ್ಭ ಹಲವು ಗಣ್ಯರು ಉಪಸ್ಥಿತರಿದ್ದರು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: