ಮೈಸೂರು

ಹೊರತೆಗೆಯುವ ತ್ಯಾಜ್ಯಗಳ ಸೂಕ್ತ ನಿರ್ವಹಣೆ ಅಗತ್ಯ : ಡಿ.ರಂದೀಪ್

ಮೈಸೂರು,ಮೇ.23:- ಆಸ್ಪತ್ರೆಯಲ್ಲಿ ವೈದ್ಯರು ದೇಹದಿಂದ ಹೊರತೆಗೆಯುವ ತಾಜ್ಯಗಳ ಸೂಕ್ತ ನಿರ್ವಹಣೆ ಅಗತ್ಯ  ಎಂದು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಗ್ರಾಮೀಣಾಭಿವೃದ್ಧಿಯ ಅಬ್ದುಲ್  ನಜೀರ್ ಸಾಬ್ ಸಂಸ್ಥೆಯ ಎಸ್.ಕೆ.ದೇವ್ ಹಾಲ್ ನಲ್ಲಿ ಮೈಸೂರು ಮೆಡಿಕಲ್ ಕಾಲೇಜ್ ವತಿಯಿಂದ ಆಯೋಜಿಸಲಾದ ಆಸ್ಪತ್ರೆಯ ತ್ಯಾಜ್ಯ ನಿರ್ವಹಣೆ ಕುರಿತ ಕಾರ್ಯಾಗಾರವನ್ನು ಡಿ.ರಂದೀಪ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಹದಿಂದ ಹೊರತೆಗೆಯುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಗಾಳಿಯಲ್ಲಿ ಹರಡಿ ಸೋಂಕುಗಳು ಹರಡುವ ಸಾಧ್ಯತೆಯೇ ಅಧಿಕವಾಗಿದೆ. ಇದರಿಂದ ಪ್ರಾಣಹಾನಿ ಸಂಭವಿಸಬಹುದು. ಅದರಿಂದ ಸೂಕ್ತವಾಗಿ ನಿರ್ವಹಿಸಬೇಕು ಎಂದರು. ಐದು ರಾಜ್ಯಗಳ ತ್ಯಾಜ್ಯ ನಿರ್ವಹಣೆಯಲ್ಲಿ ಪೈಲೆಟ್ ಪ್ರಾಜೆಕ್ಟ್ ಗಳಿದ್ದು, ಅದರಲ್ಲಿ ಕರ್ನಾಟಕವೂ ಒಂದಾಗಿದೆ. ಕರ್ನಾಟಕದಲ್ಲಿ 31 ಆರೋಗ್ಯ ಕೇಂದ್ರಗಳು ತ್ಯಾಜ್ಯ ನಿರ್ವಹಣೆ ನಡೆಸುತ್ತಿವೆ. ತ್ಯಾಜ್ಯಗಳು ಪರಿಸರಕ್ಕೆ, ಮನುಷ್ಯರಿಗೆ ಹಾನಿಕಾರಕವಾಗಿದ್ದು ಅದನ್ನು ತೊಂದರೆಯಾಗದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭ ಪಾಲಿಕೆಯ ಆಯುಕ್ತ ಜಿ.ಜಗದೀಶ್, ಸಹಸಂಯೋಜಕ ಡಾ.ಎಸ್.ಪಿ.ದುವಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ವರದಿ: ಬಿ.ಎಂ,ಎಸ್.ಎಚ್)

Leave a Reply

comments

Related Articles

error: