ನಮ್ಮೂರುಮೈಸೂರು

ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತದೆ: ಡಿ.ರಂದೀಪ್

ಮೈಸೂರಿನ ಕಲಾಮಂದಿರದಲ್ಲಿ ಮೈಸೂರು ದಸರಾ ಮಹೋತ್ಸವ-2016 ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ಸೋಮವಾರ ಚಿತ್ರಕಲಾ ಪ್ರದರ್ಶನ ಮತ್ತು ಶಿಬಿರಗಳ ಉದ್ಘಾಟನಾ ಸಮಾರಂಭ ನಡೆಯಿತು.

ಸುಚಿತ್ರ ಆರ್ಟ್ ಗ್ಯಾಲರಿಯ ಮನಮೋಹಕ ಕರಕುಶಲ ಕಲೆಗಳು ಸಾರ್ವಜನಿಕರನ್ನು ತನ್ನತ್ತ ಸೆಳೆಯುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಡಿ.ರಂದೀಪ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಚಿತ್ರಕಲೆಯು ಸಾವಿರ ಪದಗಳನ್ನು ಹೇಳುತ್ತವೆ. ದಸರಾ ಕರಕುಶಲ ವಸ್ತು ಪ್ರದರ್ಶನವು  ರಾಜ್ಯದ ಕಲಾವಿದರಿಗೆ ಮತ್ತು ಕರಕುಶಲ ವಸ್ತು ತಯಾರಕರಿಗೆ ವೇದಿಕೆಯನ್ನು ಒದಗಿಸಿ ಅವರ ಕೌಶಲ್ಯ ಪ್ರದರ್ಶನಕ್ಕೆ ಅವಕಾಶ ನೀಡಿದೆ ಎಂದರು. ಪ್ರದರ್ಶನವು ಕಲಾವಿದರನ್ನು ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಮುಡಾ ಆಯುಕ್ತ, ದಸರಾ ಕಲೆ ಮತ್ತು ಕರಕುಶಲ ಉಪಸಮಿತಿಯ ಮಹೇಶ್,ಕಾವಾ ಡೀನ್ ಬಸವರಾಜ್ ಮುಸವಳಿಗೆ ಮತ್ತಿತರರು ಉಪಸ್ಥಿತರಿದ್ದರು.

50ಕ್ಕೂ ಅಧಿಕ ವರ್ಣಚಿತ್ರಗಳು, ಚಿತ್ರಕಲೆಗಳು, ಛಾಯಾಚಿತ್ರಗಳು, ಸಾಂಪ್ರದಾಯಿಕ ಚಿತ್ರಕಲೆಗಳು, ಗ್ರಾಫಿಕ್ಸ್ ಸೇರಿದಂತೆ ಹಲವು ಕಲೆಗಳು ಗಮನ ಸೆಳೆಯುತ್ತಿವೆ.

Leave a Reply

comments

Related Articles

error: