ಕರ್ನಾಟಕಪ್ರಮುಖ ಸುದ್ದಿ

ಹೊಸ ಕ್ರೀಡಾ ನೀತಿ ಮತ್ತು ಒಳನಾಡು ಮೀನುಗಾರಿಕಾ ನೀತಿ ಜಾರಿಗೆ ಸಿದ್ದತೆ : ಪ್ರಮೋದ್ ಮಧ್ವರಾಜ್

ಪ್ರಮುಖಸುದ್ದಿ,ರಾಜ್ಯ(ಹಾವೇರಿ)ಮೇ.23:- ರಾಜ್ಯದಲ್ಲಿ ಹೊಸ ಕ್ರೀಡಾ ನೀತಿ ಮತ್ತು ಒಳನಾಡು ಮೀನುಗಾರಿಕಾ ನೀತಿ ಜಾರಿಗೆ ಸಿದ್ದತೆ ನಡೆಸಲಾಗಿದೆ ಎಂದು ಮೀನುಗಾರಿಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಂತಿಮ ಹಂತದಲ್ಲಿ  ಕ್ರೀಡಾ ನೀತಿ ಸಂಪುಟ ಮಂಡನೆಗೆ ಸಿದ್ದತೆ ನಡೆಯುತ್ತಿದೆ. ಗುಣ ಮಟ್ಟದ ಕೆಲಸದ ಬಗ್ಗೆ ನಿಗಾ ವಹಿಸಲಾಗಿದ್ದು, ಕಳಪೆ ಕಾಮಗಾರಿಗೆ ಆಸ್ಪದ ನೀಡಲ್ಲ, ಸರ್ಕಾರ ದುಡ್ಡು ಜನರ ದುಡ್ಡಾಗಿದೆ ಎಂದರು. ಕ್ರೀಡಾ ವಸತಿ ಶಾಲೆಯಲ್ಲಿ ಪೌಷ್ಠಿಕ ಆಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಜೂನ್ 1 ರಿಂದ ಕ್ರೀಡಾ  ಇಲಾಖೆಯಿಂದ ಹಾಸ್ಟೆಲ್ ನಿರ್ವಹಣೆ ಮಾಡಲಾಗುತ್ತಿದ್ದು, ಯಾವುದೇ ಕಾಂಟ್ರಾಕ್ಟ್ ನೀಡಲ್ಲ. ಕ್ರೀಡಾಳುಗಳಿಗೆ ರಾಜ್ಯದಲ್ಲಿ 98 ತರಬೇತುದಾರರಿದ್ದಾರೆ. 300 ಕ್ರೀಡಾ ತರಬೇತುದಾರರ ಅವಶ್ಯಕತೆ ಇದೆ.ಸದ್ಯಕ್ಕೆ 100 ಕೋಚ್ ಗಳನ್ನು ನೇಮಕ ಮಾಡಲು ಮುಖ್ಯಮಂತ್ರಿ ಸಮ್ಮತಿ ನೀಡಿದ್ದಾರೆ.  75 % ಕ್ರೀಡಾಪಟುಗಳ ದತ್ತು ಸ್ವೀಕಾರ ಮಾಡಿ ಖರ್ಚು ವೆಚ್ಚ ಭರಿಸಲಾಗುತ್ತದೆ. ದೊಡ್ಡ ದೊಡ್ಡ ಕಂಪನಿಗಳು ಇದಕ್ಕೆ ಕೈ ಜೋಡಿಸಿದೆ.ಉತ್ತಮ ಈಜುಕೊಳ ನಿರ್ವಹಣೆ ಡೈರೆಕ್ಟರ್ ಗಳಿಗೆ ಪ್ರಥಮ 1 ಲಕ್ಷ, ದ್ವಿತೀಯ 75 ಸಾವಿರ, ತೃತೀಯ 50 ಸಾವಿರ ಘೋಷಣೆ ಮಾಡಲಾಗುವುದು. ಮೀನುಗಾರಿಕೆ ಲೀಜ್ ಒಂದು ವರ್ಷ ಮುಂದೂಡಲಾಗುವುದು. ಐದು ವರ್ಷಕ್ಕೆ ಇದ್ದ ಲೀಜ್ ಆರು ವರ್ಷಕ್ಕೆ ಹೆಚ್ಚಳ ಮಾಡಲಾಗುವುದು. ಬರಗಾಲದ ಹಿನ್ನೆಲೆ ಒಂದು ವರ್ಷ ಹೆಚ್ಚಳ ಮಾಡಲಾಗಿದೆ. ಒಂದು ವರ್ಷದ ಲೀಜ್ ಹಣ ಮನ್ನಾ ಮಾಡಲಾಗುವುದು. ಮೀನುಗಾರರಿಗೆ ಸಧ್ಯದಲ್ಲೆ ಇನ್ ಲ್ಯಾಂಡ್ ಸೌಲಭ್ಯ ಕಲ್ಪಿಸಲಾಗುವುದು. ಬಾಗಲಕೋಟೆಯಲ್ಲಿ ಅಂಬಿಗರ ಚೌಡಯ್ಯ ಒಳನಾಡು ಮೀನು ಸಹಕಾರಿ ಸಂಘದ ತಾಂತ್ರಿಕ ನೆರವಿಗೆ 2 ಕೋಟಿ ರೂಪಾಯಿ ನೀಡಲಾಗುವುದು ಎಂದು ತಿಳಿಸಿದರು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: