ಮೈಸೂರು

ವೇಶ್ಯಾವಾಟಿಕೆ: ನಾಲ್ವರ ಬಂಧನ, ಇಬ್ಬರು ಮಹಿಳೆಯರ ರಕ್ಷಣೆ

ಮೈಸೂರು, ಮೇ ೨೩: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದ ಸಿಸಿಬಿ ಮತ್ತು ವಿಜಯನಗರ ಪೊಲೀಸರು ನಾಲ್ವರನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ವೇಶ್ಯಾವಾಟಿಕೆ ನಡೆಸುತ್ತಿದ್ದ ವಿರೇಂದ್ರ, ಮಹೇಶ್ವರಿ ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಅಜಯ್, ಗಿರೀಶ್ ಬಂಧಿತರು. ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಿಜಯನಗರ ಠಾಣಾ ವ್ಯಾಪ್ತಿಯ ೪ನೇ ಹಂತದ ಮರಿಮಲ್ಲಪ್ಪ ಕಾಂಪೌಂಡ್ ಬಳಿ ಇರುವ ಮನೆ. ನಂ. ೯೯೫೫ರ ಮೇಲೆ ದಾಳಿ ಮಾಡಿ ವೇಶ್ಯಾವಾಟಿಕೆಗೆ ಬಳಕೆ ಮಾಡಿದ್ದ ೧೬,೦೬೦ ರೂ ನಗದು, ೪ ಮೊಬೈಲ್ ಫೋನ್ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: