ಕರ್ನಾಟಕ

ಗಾಂಜಾ ವಶ : ಮೂವರ ಬಂಧನ

ರಾಜ್ಯ(ಮಂಗಳೂರು) ಮೇ.23:-   ತಮಿಳುನಾಡಿನ ಮಧುರೈ ನಿಂದ ಕಾರ್ಕಳಕ್ಕೆ ಸಾಗಿಸುತ್ತಿದ್ದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮೂವರನ್ನು  ಬಂಧಿಸಿದ್ದಾರೆ.

ಬಂಧಿತರನ್ನು ಚಂದ್ರಕುಮಾರ್, ಶಾಂತಕುಮಾರ್, ತಮಿಳ್ ಸೆಲ್ವಿ ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಮೂರು ಬ್ಯಾಗ್ ಗಳಲ್ಲಿ 2 ಕೆಜಿ ಗಾಂಜಾ ಪ್ಯಾಕ್ ಮಾಡಿ ಅನುಮಾನಾಸ್ಪದವಾಗಿ ಹಿಡಿದು ನಿಂತಿದ್ದಾಗ ಅವರ ಚಲನವಲನ ಗಮನಿಸಿ ಬಂಧಿಸಿದ್ದಾರೆ. ಬಂಧಿತರಿಂದ ಮೂರು ಮೊಬೈಲ್, 1100 ನಗದು, ನಾಲ್ಕು ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಟ್ವಾಳ ಡಿವೈಎಸ್ಪಿ ರವೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: